ರಾಜ್ಯ ಸುದ್ದಿ

ಆನಂದ್‌ ಸಿಂಗ್‌ ಮೇಲೆ ಹಲ್ಲೆ, ಬಂಧನ ಭೀತಿಯಿಂದ ತಲೆಮರೆಸಿಕೊಂಡ ಕಂಪ್ಲಿ ಶಾಸಕ ಗಣೇಶ್‌

ಬೆಂಗಳೂರು: ನಮ್ಮ ತಂದೆಯು 3 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ನಾಲ್ಕೈದು ದಿನ ಆಸ್ಪತ್ರೆಯಲ್ಲೇ ಇರಬೇಕು ಎಂದು ವೈದ್ಯರು ಸೂಚಿಸಿದ್ದಾರೆ ಎಂದು ಆನಂದ್‌ ಸಿಂಗ್‌ ಅವರ ಪುತ್ರ ಸಿದ್ಧಾರ್ಥ್ ಸಿಂಗ್ ಹೇಳಿದ್ದಾರೆ.

ಅಪೋಲೋ ಆಸ್ಪತ್ರೆ ಬಳಿ ಮಾತನಾಡಿದ ಅವರು, ಬಲಗಣ್ಣಿನ ಕೆಳಗಿನ ಭಾಗದಲ್ಲಿ ಗಾಯವಾಗಿದೆ. ಎದೆ ಕೆಳಗಿನ ಭಾಗದಲ್ಲೂ ಪೆಟ್ಟಾಗಿದೆ. ಇಂದು ಮುಂಜಾನೆ ನಡೆಯಲು ಪ್ರಯತ್ನಿಸಿದರು. ಇಂದು ವಾರ್ಡ್​​​ನಲ್ಲೇ ವಾಕ್​ ಮಾಡಿದ್ದಾರೆ. ಕೆಮ್ಮು, ಉಸಿರಾಟದ ವೇಳೆ ತೊಂದರೆ ಆಗುತ್ತಿದೆ. ಗಾಯ ಮಾಗಿದ ಮೇಲೆ ವೈದ್ಯರು ಮುಂದಿನ ಚಿಕಿತ್ಸೆ ಕುರಿತು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಯಾರ ಕುಟುಂಬದವರು ನಮ್ಮನ್ನು ಸಂಪರ್ಕಿಸಿಲ್ಲ. ಇನ್ನೂ ಮೂರು ನಾಲ್ಕು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಎದೆ ಭಾಗದಲ್ಲಿ ಮೂಳೆ ಮುರಿದಿರುವ ಸಾಧ್ಯತೆ ಇದೆ. ಅದಕ್ಕೆ ಉಸಿರಾಟ ತೊಂದರೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಬಂಧನ ಭೀತಿಯಿಂದ ತಲೆಮರೆಸಿಕೊಂಡ ಶಾಸಕ ಗಣೇಶ್: ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ್ದ ಶಾಸಕ ಗಣೇಶ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಬಂಧನ ಭೀತಿಯಿಂದಾಗಿ ಗಣೇಶ್‌ ತಲೆಮರೆಸಿಕೊಂಡಿದ್ದಾರೆ. ಕ್ಷೇತ್ರವನ್ನೇ ತೊರೆದಿದ್ದಾರೆ ಎನ್ನಲಾಗಿದ್ದು, ಲೊಕೇಶನ್ ಸಿಗದಂತೆ ಮೊಬೈಲ್ ಸ್ವಿಚ್ ಅಫ್ ಮಾಡಿಕೊಂಡಿದ್ದಾರೆ. ಹೊಸಪೇಟೆಯ ಮೃತ್ಯುಂಜಯ ನಗರದಲ್ಲಿರುವ ಗಣೇಶ್ ನಿವಾಸಕ್ಕೆ ಬೀಟಿ ನೀಡಿದ ಬಿಡದಿ ಪೋಲಿಸರು ಭೇಟಿ ನೀಡಿದ್ದಾರೆ. ಗಣೇಶ್ ಬಂಧನಕ್ಕೆ ಬಳ್ಳಾರಿ ಪೋಲಿಸರ ನೆರವನ್ನು ಕೂಡ ಕೋರಿದ್ದಾರೆ.

About the author

ಕನ್ನಡ ಟುಡೆ

Leave a Comment