ರಾಜಕೀಯ

ಆನಂದ್ ಸಿಂಗ್ ಮೇಲೆ ಹಲ್ಲೆ: ಶನಿವಾರ ರಾತ್ರಿ ನಿಜವಾಗಿ ನಡೆದದ್ದೇನು: ಇಲ್ಲಿದೆ ಇನ್ ಸೈಡ್ ಸ್ಟೋರಿ

ಬೆಂಗಳೂರು: ಕಾಂಗ್ರೆಸ್ ಶಾಸಕರು ತಂಗಿದ್ದ ರೆಸಾರ್ಟಿನಲ್ಲಿ ಆನಂದ್ ಸಿಂಗ್ ಹಾಗೂ ಗಣೇಶ್ ನಡುವೆ ನಡೆದಿರುವ ಬಾಟಲ್ ಗಲಾಟೆಗೆ ಕಾಂಗ್ರೆಸ್ ಶಾಸಕರು ಬೆಚ್ಚಿಬಿದ್ದಿದ್ದಾರೆ.
ರಾತ್ರಿ ಪಾರ್ಟಿ ಆರಂಭಗೊಂಡಾಗ ಎಲ್ಲರೊಂದಿಗೆ ಸರಿಯಾಗಿದ್ದ ಶಾಸಕರು ಮದ್ಯದ ಅಮಲು ಏರುತ್ತಿದಂತೆ ಪರಸ್ಪರ ಕಿತ್ತಾಟ ನಡೆಸಿದ್ದಾರೆ.ಇದಕ್ಕೂ ಮುಂದೆ ಶನಿವಾರ ನಡೆದ ಘಟನಾವಳಿಗಳ ಬಗ್ಗೆ ವಿವರ ಇಲ್ಲಿದೆ. ಶನಿವಾರ ವಿಧಾನಸೌಧದಲ್ಲಿ  ನಡೆದ  ಬಳ್ಳಾರಿ ಮಿನರಲ್ಸ್ ಪೌಂಡೇಷನ್ ಸಭೆಯ ಆನಂದ್ ಸಿಂಗ್, ಗಣೇಶ್ ಮತ್ತು ಭೀಮಾನಾಯಕ್ ಭಾಗವಹಿಸಿದ್ದರು. ಜೊತೆಗೆ ಅದಾದ ನಂತರ ಇಬ್ಬರಿಗೂ ಕಾಮನ್ ಫ್ರೆಂಡ್ ಆಗಿದ್ದವರೊಬ್ಬರ ವಿವಾಹ ಕಾರ್ಯಕ್ರಮಕ್ಕೆ ತೆರಳಿದ್ದರು. ಅದಾದ ನಂತರ ಮೂವರು ಈಗಲ್ ಟನ್ ರೆಸಾರ್ಟ್ ಗೆ ತೆರಳಿದ್ದರು.  ರಾತ್ರಿ 3.30ರ ವೇಳೆಗೆ ಪಕ್ಷದ ನಿಷ್ಠೆಯ ಬಗ್ಗೆ ಜಗಳ ಆರಂಭವಾಯಿತು.
ಆಕ್ರೋಶಗೊಂಡ ಗಣೇಶ್, ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದರು, ಇದರಿಂದ ಅವರ ಮುಖ ಬಲಬಾಗದ ಹಣೆ, ಕಣ್ಣಿನ ಭಾಗಕ್ಕೆ ಹೊಡೆತ ಬಿದ್ದಿದೆ. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಮತ್ತು ಸೆಕ್ಯೂರಿಟಿ ಜಗಳಕ್ಕೆ ಬ್ರೇಕ್ ಆಗಿದ್ದರು. ಬೆಳಗ್ಗೆ 7 ಗಂಟೆ ಸುಮಾರಿಗೆ ಅಪೊಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

About the author

ಕನ್ನಡ ಟುಡೆ

Leave a Comment