ಸುದ್ದಿ

ಆನೆ ತುಳಿತಕ್ಕೆ ಮಹಿಳೆ ಬಲಿ

ಹನೂರು: ಇಲ್ಲಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಡೆಕುರುಬನದೊಡ್ಡಿ ಗ್ರಾಮದ ನಿವಾಸಿ ರಾಜಮ್ಮ (30) ಆನೆ ತುಳಿತದಿಂದ ಮಂಗಳವಾರ ಮೃತಪಟ್ಟಿದ್ದಾರೆ. ರಾಜಮ್ಮ ಇಬ್ಬರು ಮಕ್ಕಳು ಹಾಗೂ ಪತಿ ಶಿವಣ್ಣ ಅವರೊಂದಿಗೆ ತಮ್ಮ ತವರೂರಾದ ಕೋಟೆಮಾಳಕ್ಕೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.

ಗೇರುಮಾಳ್ಯಂ ಸಮೀಪ ಎದುರಾದ ಆನೆ ದಾಳಿ ಮಾಡಿದೆ. ಪತಿಯು ಇಬ್ಬರು ಮಕ್ಕಳನ್ನು ಎತ್ತಿಕೊಂಡು ಓಡಿದ್ದಾರೆ. ಆದರೆ ರಾಜಮ್ಮ ತಪ್ಪಿಸಿಕೊಳ್ಳುವ ವೇಳೆ ಎಡವಿ ಬಿದ್ದಿದ್ದು, ಆಗ ಆನೆಯು ತುಳಿದು ಕೊಂದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಗ್ರಾಮದಲ್ಲಿ ಇಬ್ಬರು ಆನೆ ದಾಳಿಗೆ ಮೃತಪಟ್ಟಿದ್ದಾರೆ ಎಂದು ಬೈಲೂರುನಲ್ಲಿ ತಿಳಿದುಬಂದಿದೆ.

 

 

About the author

ಕನ್ನಡ ಟುಡೆ

Leave a Comment