ರಾಜಕೀಯ

ಆಪರೇಷನ್​ ಕಮಲಕ್ಕೆ ಒಳಗಾಗಿ ಕಷ್ಟ ಅನುಭವಿಸಬೇಡಿ: ಮಾಜಿ ಸಚಿವ ಆನಂದ ಅಸ್ನೋಟಿಕರ್​

ಕಾರವಾರ: ಆಪರೇಷನ್​ ಕಮಲಕ್ಕೆ ಒಳಗಾಗಿ ಕಷ್ಟ ಅನುಭಿವಿಸುವುದು ಬೇಡ. ಯಾರೂ ಆಪರೇಷನ್​ ಕಮಲಕ್ಕೆ ಒಳಗಾಗಬೇಡಿ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್​ ಮನವಿ ಮಾಡಿದ್ದಾರೆ. ಮಾಧ್ಯಮಗಳ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದ ಅಸ್ನೋಟಿಕರ್​ ಕಾಂಗ್ರೆಸ್​ನ ಅತೃಪ್ತ ಶಾಸಕರು ಯಾರೂ ಆಪರೇಷನ್​ ಕಮಲಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದರು. ಜತೆಗೆ ನಿಮಗೆ ಅಸಮಾಧಾನವಿದ್ದರೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಬಳಿ ಹೇಳಿಕೊಳ್ಳಿ. ಬಿಜೆಪಿಗೆ ಮಾತ್ರ ಹೋಗಬೇಡಿ. ಕಾಂಗ್ರೆಸ್​ ಬಿಟ್ಟು ಬೇಕಾದರೆ ಜೆಡಿಎಸ್​ಗೆ ಬನ್ನಿ ಎಂದು ಅಸ್ನೋಟಿಕರ್​ ಮನವಿ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment