ರಾಷ್ಟ್ರ ಸುದ್ದಿ

ಆಯುಷ್ಮಾನ್ ಭಾರತ್ ಯೋಜನೆಗೆ 100 ದಿನ: ಭಾರತ ಸರ್ಕಾರವನ್ನು ಅಭಿನಂದಿಸಿದ ಬಿಲ್ ಗೇಟ್ಸ್

ನವದೆಹಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ “ಆಯುಷ್ಮಾನ್ ಭಾರತ್” ಆರೋಗ್ಯ ಸೇವೆ ಯೋಜನೆಯ 100 ದಿನಗಳ ಯಶಸ್ಸಿಗಾಗಿ ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.”ಆಯುಶ್ಮಾನ್ ಭಾರತ್” ಯೋಜನೆಯ ಮೊದಲ ನೂರು ದಿನಗಳ ಯಶಸ್ಸಿಗಾಗಿ ಭರತ ಸರ್ಕಾರಕ್ಕೆ ಅಭಿನಂದನೆಗಳು.ಮುಂದಿನ ದಿನಗಳಲ್ಲಿ ಈ ಯೋಜನೆ ಎಷ್ಟು ಸಂಖ್ಯೆಯ ಭಾರತೀಯರನ್ನು ತಲುಪಲಿದೆ ಎನ್ನುವುದನ್ನು ಕಾಣಲು ನಾನು ಉತ್ಸುಕನಾಗಿದ್ದೇನೆ”  ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ. ಆಯುಶ್ಹ್ಮಾನ್ ಭಾರತ್ ಮೊದಲ ನೂರು ದಿನಗಳಲ್ಲಿ  685000 ಫಲಾನುಭವಿಗಳನ್ನು ತಲುಪಿದೆ. ಯೋಜನೆ ಮೂಲಕ ಉಚಿತ ಆರೋಗ್ಯ ಸೇವೆ ಪಡೆಯುವವರ ಸಂಖ್ಯೆ ಶೀಘ್ರವಾಗಿ ವರ್ಧಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ ಬಳಿಕ ಗೇಟ್ಸ್ ಈ ಅಭಿನಂದನೆ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment