ಸಿನಿ ಸಮಾಚಾರ

ಆರು ದಿನಗಳ ಬಳಿಕ ಡಿಸ್ಚಾರ್ಜ್​ ಆದ ಚಾಲೆಂಜಿಂಗ್​ ಸ್ಟಾರ್​

ಕಾರು ಅಪಘಾತದಿಂದಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್​  ಅವರು ಇಂದು ಮೈಸೂರಿನ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದರು. ಈ ವೇಳೆ ಮಾಧ್ಯಮದ ಮುಂದೆ ಮಾತನಾಡಿದ ಅವರು,  ಕೇವಲ ಒಂದು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ. ವೈದ್ಯರು ನನಗೆ ಇಉತ್ತಮ ಚಿಕಿತ್ಸೆ ನೀಡಿದರು ಎಂದು ಧನ್ಯವಾದಗಳು ಎಂದು ತಿಳಿಸಿದರು.

ಅಪಘಾತದ ಬಗ್ಗೆ ತಿಳಿಸಿದ ಅವರು, ನನ್ನ ಕಾರು  ವಿದ್ಯುತ್​ ಕಂಬಕ್ಕೆ  ಹೊಡೆದೇ ಇಲ್ಲ.  ಬೇರೊಂದು ಅಪಘಾತದಲ್ಲಿ ಆ ಕಂಬ ಉರುಳಿಬಿದ್ದಿತ್ತು. ನಾವು ಕಾರಿನಲ್ಲಿ ಆರು ಜನ ಇರಲಿಲ್ಲ, 5 ಜನ ಮಾತ್ರ ಇದ್ದೆವು. ಊಟ ಮಾಡಿ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಜಾಗ ನೋಡಿದರೆ ಅಪಘಾತದ ಬಗ್ಗೆ ಗೊತ್ತಾಗುತ್ತದೆ ಎಂದರು ಕಾರನ್ನು ನನ್ನ ಗೆಳೆಯ ಓಡಿಸುತ್ತಿದ್ದರು. ಇದರಲ್ಲಿ ರಾಯ್​ ಆಂಟೋನಿಯ ತಪ್ಪು ಕೂಡ ಇಲ್ಲ. ಅಪಘಾತದ ಬಗ್ಗೆ ಸಾಕಷ್ಟು ಊಹಾ ಪೋಹಾ ನಡೆದಿದೆ. ಆದರೆ ಅದೆಲ್ಲಾ ಸುಳ್ಳು. ನನಗೆ ಒಂದು ತಿಂಗಳ ವಿಶ್ರಾಂತಿ ಸಾಕು. ಒಂದು ವರ್ಷ ಸುಧಾರಿಸಿಕೊಳ್ಳುವಂತಹ ಅಪಘಾತವಾಗಿಲ್ಲ ಎಂದರು. ದರ್ಶನ್​ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡು ಬರುತ್ತಿದ್ದು, ಅವರಿಗೆ ವಿಶ್ರಾಂತಿ ಅವಶ್ಯಕವಿದೆ. ಹಾಗೇ ಸಣ್ಣ ಪುಟ್ಟ ವೈದ್ಯಕೀಯ ಪರೀಕ್ಷೆ ಬಾಕಿ ಇದ್ದು, ದೈನಂದಿನ ತಪಾಸಣೆ ಅವಶ್ಯಕವಿದೆ. ಈ ಹಿನ್ನಲೆಯಲ್ಲಿ ಅವರಿಗೆ ಮನೆಯಲ್ಲಿಯೇ ವಿಶ್ರಾಂತಿ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ.

About the author

ಕನ್ನಡ ಟುಡೆ

Leave a Comment