ದೇಶ ವಿದೇಶ

ಆರು ವರ್ಷಗಳ ಬಳಿಕ ತವರಿಗೆ ಮರಳಿದ ಮಲಾಲ

ಇಸ್ಲಮಾಬಾದ್​: ತಾಲಿಬಾನ್​ಗಳ ಗುಂಡಿನ ದಾಳಿಗೆ ಒಳಗಾಗಿ ತನ್ನ ತವರು ನೆಲ ತೊರೆದಿದ್ದ ನೊಬೆಲ್​ ಪ್ರಶಸ್ತಿ ವಿಜೇತೆ ಮಲಾಲ ಯೂಸಫ್ ಝಾಯಿ ಆರು ವರ್ಷಗಳ ಬಳಿಕ ತನ್ನ ದೇಶಕ್ಕೆ ವಾಪಾಸಾಗಿದ್ದಾರೆ.

ಈ ಸಂಬಂಧ ವಿಡಿಯೋವೊಂದನ್ನು ಪಾಕಿಸ್ತಾನದ ಜಿಯೋ ಟಿವಿ ಬಿತ್ತರಿಸಿದ್ದು, ವಿಡಿಯೋದಲ್ಲಿ ಮಲಾಲ ಅವರು ಇಸ್ಲಮಾಬಾದ್​ ವಿಮಾನ ನಿಲ್ದಾಣವನ್ನು ಇಳಿದು ತಮ್ಮ ಕುಟುಂಬದೊಂದಿಗೆ ಬೆಂಗಾವಲು ಪಡೆಯ ಕಾರಿನತ್ತ ಬರುತ್ತಿರುವ ದೃಶ್ಯವಿದೆ.

ದೇಶಕ್ಕೆ ಮರಳಿರುವ ಮಲಾಲ ಪ್ರಧಾನಿ ಶಾಹಿದ್​ ಅಬ್ಬಾಸಿ ಅವರೊಂದಿಗೆ ಸಭೆಯೊಂದನ್ನು ಹಮ್ಮಿಕೊಳ್ಳಲಿದ್ದಾರೆ. ಅಲ್ಲದೆ, ಅವರ ಪ್ರವಾಸದ ಮಾಹಿತಿಯನ್ನು ಬಹಳ ಗೌಪ್ಯವಾಗಿ ಇಡಲಾಗಿದೆ. ಮಲಾಲರ ರಕ್ಷಣೆಗಾಗಿ ಭದ್ರತೆಯನ್ನು ನೀಡಲಾಗಿದ್ದು, ಮಲಾಲ ಫಂಡ್​ ಗ್ರೂಪ್​ ಅಧಿಕಾರಿಗಳೊಂದಿಗೆ ನಾಲ್ಕು ದಿನದ ಪ್ರವಾಸಕ್ಕಾಗಿ ಆಗಮಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಮಾರ್ಚ್​ 23ರ ಪಾಕಿಸ್ತಾನ ದಿನದಂದು ತಮ್ಮ ಹಳೆಯ ದಿನಗಳಲ್ಲು ಮೆಲಕುಹಾಕಿ ಟ್ವೀಟ್​ ಒಂದನ್ನು ಮಾಡಿದ್ದ ಮಲಾಲ, ಈ ದಿನ ನಾನು ನಮ್ಮ ಶಾಲೆಯ ಮೇಲೆ ನಿಂತು ರಾಷ್ಟ್ರ ಗೀತೆ ಹಾಗೂ ಕ್ರಿಕೆಟ್​ ಆಡುತ್ತಿದ್ದೆವು. ಪಾಕಿಸ್ತಾನ ದಿನದ ಶುಭಾಶಯಗಳನ್ನು ತಿಳಿಸಿದ್ದರು.

ಮಲಾಲ 2014ರಲ್ಲಿ ತನ್ನ 17 ವಯಸ್ಸಿನಲ್ಲಿಯೇ ಪ್ರತಿಷ್ಟಿತ ನೊಬೆಲ್​ ಪ್ರಶಸ್ತಿ ಗೆದ್ದ ವಿಶ್ವದ ಅಂತ್ಯಂತ ಕಿರಿಯಳು ಎಂಬ ಕೀರ್ತಿಗೆ ಭಾಜನರಾದವರು. ಹೆಣ್ಣು ಮಕ್ಕಳ ಶಿಕ್ಷಣ ಹಕ್ಕಿಗೆ ಹೋರಾಟ ನಡೆಸುತ್ತಿದ್ದ ಮಲಾಲ ತಾಲಿಬಾನ್​ಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

2012 ರಲ್ಲಿ ಶಾಲಾ ವಾಹನದಲ್ಲಿ ಶಾಲೆ ಮುಗಿಸಿ ಮನೆಗೆ ಪ್ರಯಾಣಿಸುವಾಗ ಬಸ್​ ಅಡ್ಡಗಟ್ಟಿದ ಉಗ್ರರ ಗುಂಪೊಂದು ಮಲಾಲ ಮೇಲೆ ಗುಂಡಿನ ದಾಳಿ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಅವರನ್ನು ಗ್ರೇಟ್​ ಬ್ರಿಟನ್​ನಲ್ಲಿ ಚಿಕಿತ್ಸೆ ಕೊಡಿಸಿ ಅಲ್ಲಿಯೇ ಉಳಿಯಲು ಹಾಗೂ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

About the author

ಕನ್ನಡ ಟುಡೆ

Leave a Comment