ಸುದ್ದಿ

ಆರ್ಟ್ ಆಫ್ ಲೀವಿಂಗ್ ರವಿಶಂಕರ್ ಗೂರೂಜಿಗೆ ಕೊಲೆ ಬೆದರಿಕೆ

ಬೆಂಗಳೂರು, ಜೂ.9-ಆರ್ಟ್ ಆಫ್ ಲೀವಿಂಗ್(ಐಒಲ್) ಆಧ್ಯಾತ್ಮಿಕ ಕೇಂದ್ರದ ಸಂಸ್ಥಾಪಕರಾದ ಶ್ರೀ ರವಿಶಂಕರ್ ಅವರಿಗೆ ಮತ್ತೆ ಪ್ರಾಣ ಬೆದರಿಕೆ ಹಾಕಲಾಗಿದೆ. ಆಶ್ರಮದ ಆಡಳಿತಾಧಿಕಾರಿ ಈ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.   ಶ್ರೀ ಅವರನ್ನು ಗುಂಡಿಟ್ಟು ಹತ್ಯೆ ಮಾಡುವುದಾಗಿ ಜೂ.1ರಂದು ಫೇಸ್‍ಬುಕ್‍ನಲ್ಲಿ ಬೆದರಿಕೆ ಹಾಕಿದ ಮೈಸೂರು ಮೂಲದ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಶ್ರೀ ಅವರಿಗೆ ಪ್ರಾಣ ಬೆದರಿಕೆ ಸಂದೇಶಗಳು ಹೊಸದಲ್ಲ. ಈ ಹಿಂದೆ ಇಸ್ಲಾಮಿಕ್ ಸ್ಟೇಟ್‍ನೊಂದಿಗೆ ಗುರುತಿಸಿಕೊಂಡಿರುವ ಡಾಯಿಶ್ ಮತ್ತು ತೆಹ್‍ರೀಕ್-ಎ-ತಾಲಿಬಾಲ್ ಪಾಕಿಸ್ತಾನ ಉಗ್ರಗಾಮಿ ಸಂಘಟನೆಗಳಿಗೆ ಐಒಎಸ್ ಸ್ಥಾಪಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ನಮಗೆ ತಿಳಿದ ವ್ಯಕ್ತಿಗಳ ನಡುವೆ ಫೇಸ್ ಬುಕ್ ಪೋಸ್ಟ್‍ನಲ್ಲಿದ್ದ ಈ ಸಂದೇಶದಿಂದ ನಮಗೆ ವಿಷಯ ತಿಳಿಯಿತು. ಗುರೂಜಿ ಅವರಿಗೆ ಜೀವ ಬೆದರಿಕೆ ಇರುವುದಾಗಿ ಆಶ್ರಮದ ಭಕ್ತರು ತಿಳಿಸಿದರು. ನಾವು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರ್ಟ್ ಆಫ್ ಲೀವಿಂಗ್ ಇಂಟರ್‍ನ್ಯಾಷನಲ್ ಸೆಂಟರ್‍ನ ಆಡಳಿತಾಧಿಕಾರಿ ನಿಖಿಲೇಶ್ ಶೆಣೈ ತಿಳಿಸಿದ್ದಾರೆ.

ಕನಕಪುರ ರಸ್ತೆಯಲ್ಲಿರುವ ಹಾರೋಹಳ್ಳಿಯ ನಿವಾಸಿ ಹಾಗೂ ಮೈಸೂರು ಮೂಲದ ಸ್ನಾತಕೋತ್ತರ ಪದವೀಧರ ಎಚ್.ರವೀಂದ್ರ ಎಂಬಾತನ ಫೇಸ್‍ಬುಕ್ ಪೋಸ್ಟ್ ಮೂಲಕ ಶ್ರೀಗಳನ್ನು ಗುಂಡಿಟ್ಟು ಕೊಲ್ಲುವ ಬೆದರಿಕೆ ಸಂದೇಶ ಹಾಕಲಾಗಿತ್ತು (ಈಗ ಅದನ್ನು ಅಳಿಸಿ ಹಾಕಲಾಗಿದೆ),  ಈ ಪೋಸ್ಟ್ ನಲ್ಲಿ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿದ್ದು, ಆಶ್ರಮದ ಸೌಹಾರ್ದಯುತ ವಾತಾವರಣಕ್ಕೆ ಭಂಗ ಉಂಟು ಮಾಡುವಂಥ ಪ್ರಯತ್ನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ನಾಪತ್ತೆಯಾಗಿರುವ ಹಾರೋಹಳ್ಳಿ ರವೀಂದ್ರನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment