ರಾಷ್ಟ್ರ ಸುದ್ದಿ

ಆರ್‌ಎಸ್‌ಎಸ್‌ನ ಅಖೀಲ ಭಾರತೀಯ ಪ್ರತಿನಿಧಿ ಸಭೆ ಸಮಾವೇಶ ಆರಂಭ

ಗ್ವಾಲಿಯರ್‌ : ರಾಷ್ಟ್ರೀಯ  ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಅತ್ಯುನ್ನತ ನೀತಿ ನಿರ್ಧಾರ ರೂಪಿಸುವ ‘ಅಖೀಲ ಭಾರತೀಯ ಪ್ರತಿನಿಧಿ ಸಭೆ’ ಯ ಮೂರು ದಿನಗಳ ವಾರ್ಷಿಕ ಸಭೆ ಇಂದಿಲ್ಲಿ ಆರಂಭಗೊಂಡಿತು. 43 ಸಂಘ ಪ್ರಾಂತ್ಯಗಳು ಮತ್ತು 11 ಪ್ರಾದೇಶಿಕ ವಿಭಾಗಗಳ ಸುಮಾರು 1,400 ಆಯ್ದ ಪ್ರತಿನಿಧಿಗಳು ಭಾಗವಹಿಸುತ್ತಿರುವ ಈ ಸಮಾವೇಶದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪಾಲ್ಗೊಳ್ಳುತ್ತಾರೆ. ಮೂರು ದಿನಗಳ ಈ ಸಮಾವೇಶದಲ್ಲಿ  ಶಿಕ್ಷಣ ರಂಗವೂ ಸೇರಿದಂತೆ ಆರ್‌ಎಸ್‌ಎಸ್‌ ವಿವಿಧ ಕ್ಷೇತ್ರಗಳಲ್ಲಿ ಕೈಗೊಳ್ಳುವ ವರ್ಷ ಪೂರ್ತಿ ಕಾರ್ಯಕ್ರಮಗಳ ರೂಪರೇಖೆಯನ್ನು ನಿರ್ಧರಿಸಲಾಗುವುದು.

 

About the author

ಕನ್ನಡ ಟುಡೆ

Leave a Comment