ರಾಷ್ಟ್ರ ಸುದ್ದಿ

ಆರ್ ಬಿಐ ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ

ನವದೆಹಲಿ: ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್’ನ ನೂತನ ಗವರ್ನರ್ ಆಗಿ ಮಾಜಿ ಐಎಎಸ್ ಅಧಿಕಾರಿ ಶಕ್ತಿಕಾಂತ್ ದಾಸ್ (61) ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಈ ಮೂಲಕ ತೆರವಾಗಿದ್ದ ಸ್ಥಾನವನ್ನು ಕೇವಲ ಒಂದೇ ದಿನದಲ್ಲಿ ಭರ್ತಿ ಮಾಡುವ ಮೂಲಕ ಪಟೇಲ್ ನೀಡಿದ್ದ ಆಘಾತವನ್ನು ಸರಿಪಡಿಸುವ ಯತ್ನವನ್ನು ಕೇಂದ್ರ ಮಾಡಿದೆ. ಊರ್ಜಿತ್ ಪಟೇಲ್ ರಾಜೀನಾಮೆಂಯಿಂದಾಗಿ ತೆರವಾಗಿದ್ದ ಹುದ್ದೆಂಗೆ ಕೂಡಲೇ ಹಂಗಾಮಿ ಗವರ್ನರ್ ನೇಮಕ ಮಾಡುವ ಸಾಧ್ಯತೆ ಇದೆ ಎಂಬ ವರದಿಗಳು ಇದ್ದವಾದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಕುರಿತು ಸಂಪುಟ ಸಮಿತಿಯು, ಮಂಗಳವಾರವೇ ಶಕ್ತಿಕಾಂತ್ ದಾಸ್ ಅವರನ್ನು ನೇಮಕ ಮಾಡಿತು.
ತಮಿಳುನಾಡು ಮೂಲದ 1980ನೇ ಬ್ಯಾಚ್’ನ ಐಎಎಸ್ ಅಧಿಕಾರಿಯಾಗಿದ್ದ ದಾಸ್ ಅವರನ್ನು 2014ರಲ್ಲಿ ಎನ್’ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಹಣಕಾಸು ಸಚಿವಾಲಯಕ್ಕೆ ತರಲಾಗಿತ್ತು. 2016ರಲ್ಲಿ ಕೇಂದ್ರ ಸರ್ಕಾರ ಅಪನಗದೀಕರಣ ಘೋಷಿಸಿದ ಬಳಿಕ ದೇಶದಾದ್ಯಂತ ಉಂಟಾಗಿದ್ದ ನೋಟಿನ ಕೊರತೆ ಮತ್ತು ಇತರೆ ಹಣಕಾಸಿನ ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಹೊಣೆಯನ್ನು ಸರ್ಕಾರ ದಾಸ್’ಗೆ ವಹಿಸಿತ್ತು.

About the author

ಕನ್ನಡ ಟುಡೆ

Leave a Comment