ಕ್ರೀಡೆ

ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್: ಸಿಂಧೂಗೆ ಸೋಲು, ಎರಡನೇ ಸುತ್ತಿಗೆ ಸಾಯ್ ಪ್ರಣೀತ್

ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧೂ ಮೊದಲ ಸುತ್ತಿನಲ್ಲೇ ಸೋತು ಹಿಂದೆ ಸರಿದಿದ್ದಾರೆ. ಇನ್ನೊಂದೆಡೆ ಪುರುಷರ ವಿಭಾಗದಲ್ಲಿ ಸಾಯ್ ಪ್ರಣೀತ್ ಎರಡನೇ ಸುತ್ತು ಪ್ರವೇಶಿಸಲು ಯಶಸ್ವಿಯಾಗಿದ್ದಾರೆ.
ದಕ್ಷಿಣ ಕೊರಿಯಾ ಎದುರಾಳಿ ಸುಂಗ್ ಜಿ ಹ್ಯೂನ್ ವಿರುದ್ಧ  16-21, 22-20, 18-21ಸೆಟ್ ಗಳಿಂದ ಸಿಂಧೂ ಪರಾಜಿತರಾಗಿದ್ದಾರೆ. ಇದು ಸುಂಗ್ ಜಿ ಎದುರಲ್ಲಿ ಸಿಂಧೂ ಸೋಲುಣ್ಣುತ್ತಿರುವುದು ಎರಡನೇ ಬಾರಿಯಾಗಿದ್ದು ಇದಕ್ಕೆ ಮುನ್ನ ಕಳೆದ ವರ್ಷ ಹಾಂಗ್ ಕಾಂಗ್ ಓಪನ್ ಪಂದ್ಯಾವಳಿಯಲ್ಲಿ ಸಹ ಸಿಂಧೂ ಕೊರಿಯಾ ಆಟಗಾರ್ತಿಗೆ ಮಣಿಡೀಡ್ಡಾೠ.
ಸಿಂಧೂ, ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಅವರ ಕೋಚ್ ಆಗಿರುವ  ಪುಲ್ಲೆಲಾ ಗೋಪಿಚಂದ್ 2001ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಚಾಂಪಿಯನ್ ಆಗಿದ್ದು ಹೊರತುಪಡಿಸಿದರೆ ಇದುವರೆಗೆ ಯಾವೊಬ್ಬ ಭಾರತೀಯನೂ ಪ್ರಶಸ್ತಿ ಜಯಿಸಿಲ್ಲ. ಈ ಬಾರಿ ಸಿಂಧೂ ಸಹ ಮೊದಲ ಸುತ್ತಲ್ಲೇ ಹೊರಬಿದ್ದು ಭಾರತೀಯರ ಭರವಸೆಗೆ ಮತ್ತೆ ತಣ್ಣೀರೆರಚಿದ್ದಾರೆ. ಪುರುಷರ ವಿಭಾಗದ ಪಂದ್ಯದಲ್ಲಿ ಭಾರತದ ಸಾಯ್ ಪ್ರಣೀತ್ ತನ್ನ ಎದುರಾಳಿ ಇನ್ನೋರ್ವ ಭಾರತೀಯ ಕ್ರೀಡಾಪಟು ಎಚ್ಎಸ್. ಪ್ರಣೋಯ್ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.52  ನಿಮಿಷಗಳ ಪಂದ್ಯದಲ್ಲಿ ಪ್ರಣೀತ್ 21-19, 21-19  ಸೆಟ್ ಗಳಿಂದ ಜಯ ಸಾಧಿಸಿದ್ದಾರೆ.

About the author

ಕನ್ನಡ ಟುಡೆ

Leave a Comment