ಕ್ರೀಡೆ

ಆಸಿಸ್​​ ಟೆಸ್ಟ್​ ಸರಣಿಗೆ ಆಯ್ಕೆಯಾಗದ ಶಿಖರ್ ಧವನ್

ನವದೆಹಲಿ: ಆಸಿಸ್​​ ಟೆಸ್ಟ್​ ಸರಣಿಗೆ ಆಯ್ಕೆಯಾಗದ ಶಿಖರ್ ಧವನ್ ತೀವ್ರ ಬೇಸರಗೊಂಡಿದ್ದು, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಶಿಖರ್​ ಧವನ್​ ಆಯ್ಕೆಯಾಗಿಲ್ಲ ಎಂಬುದು ಹಳೇ ಸುದ್ದಿಯಾದರೂ ಕೂಡ ಗಬ್ಬರ್ ಸಿಂಗ್​ ಈ ಬಗ್ಗೆ ಈಗ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಧವನ್, ‘ಹೌದು, ನನಗೆ ಸ್ವಲ್ಪ ಬೇಸರ ಆಗಿದೆ. ಹಾಗಂತ ನಾನು ಕೊರಗಿ ಕೂರುವುದಿಲ್ಲ. ನಾನು ನನ್ನ ಆಟವನ್ನು ಇಷ್ಟಪಡುತೇನೆ. ಈ ಬಿಡುವಿನ ಸಮಯದಲ್ಲಿ ಹೆಚ್ಚಿನ ಅಭ್ಯಾಸ ಮಾಡಿ ಫಿಟ್​ ಆಗಿರುವ ಕಡೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.ಇದೇ ವೇಳೆ ಆಸಿಸ್ ಟೆಸ್ಟ್ ಸರಣಿ ಕುರಿತು ಮಾತನಾಡಿದ ಧವನ್, ‘ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವುದಕ್ಕೆ ಇದೇ ಉತ್ತಮವಾದ ಸರಣಿ ಎಂದು ನನಗನಿಸುತ್ತದೆ. ಮೂರು ವಿಭಾಗದಲ್ಲೂ ನಾವು ಉತ್ತಮ ಆಟವನ್ನು ಆಡಬೇಕು. ಬ್ಯಾಟಿಂಗ್​, ಫೀಲ್ಡಿಂಗ್​, ಬೌಲಿಂಗ್​ ಹಾಗೂ ಕ್ಯಾಚಿಂಗ್ ನಲ್ಲಿ ನಾವು ಬಲವಾಗಬೇಕು. ಸ್ಥಿರ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯಾವನ್ನು ಬಗ್ಗುಬಡಿಯುವ ಪ್ರಯತ್ನ ಮಾಡಬೇಕು ಎಂದು ಧವನ್​​ ಸಲಹೆ ನೀಡಿದ್ದಾರೆ. ವಿಶ್ವಕಪ್ ಗೆ ಇನ್ನು ಆರೇ ತಿಂಗಳು ಬಾಕಿ ಇದೆ. ಹೀಗಿರುವಾಗ ಅದರ ಕಡೆ ಗಮನಹರಿಸಿ ಉತ್ತರ ಪ್ರದರ್ಶನ ನೀಡಬೇಕಿದ್ದು, ನಮ್ಮನ್ನು ನಾವು ಬಲಪಡಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment