ಕ್ರೀಡೆ

ಆಸೀಸ್‍ಗೆ ಮುಳುವಾಯ್ತು ಅಜಾಗರೂಕತೆ; ಧೋನಿ ರನ್ಔಟ್ ಆಗಿದ್ರೆ ಕಥೆನೇ ಬೇರೆ ಆಗ್ತಿತ್ತು: ವಿಡಿಯೋ ವೈರಲ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಆದರೆ ರೋಚಕ ಘಟ್ಟದಲ್ಲಿ ಆಸೀಸ್ ಆಟಗಾರರು ಸ್ವಲ್ಪ ಜಾಗರೂಕರಾಗಿದ್ರು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿತ್ತು.
ಪಂದ್ಯ ಗೆಲ್ಲಲು ಟೀಂ ಇಂಡಿಯಾಗೆ 31 ಎಸೆತಗಳಲ್ಲಿ 45 ರನ್ ಬೇಕಿತ್ತು. ಈ ವೇಳೆ ಎಂಎಸ್ ಧೋನಿ 36 ರನ್ ಗಳಿಸಿದ್ದಾಗ ಪಂದ್ಯದ 45ನೇ ಓವರ್ ನ ಕೊನೆಯ ಎಸೆತದಲ್ಲಿ ಸ್ಟ್ರೈಕ್ ನಲ್ಲಿದ್ದ ಧೋನಿ ಸಿಂಗಲ್ ರನ್ ತೆಗೆದುಕೊಂಡರು.
ಈ ವೇಳೆ ಫೀಲ್ಡರ್ ಚೆಂಡನ್ನು ನೇರವಾಗಿ ಕೀಪರ್ ಕೈಗೆ ಎಸೆಯುತ್ತಾರೆ. ನಿಧಾನವಾಗಿ ಓಡಿ ಬರುತ್ತಿದ್ದ ಧೋನಿ ಸಹ ತಾವು ಸ್ಕ್ರೀಜ್ ಗೆ ಬ್ಯಾಟ್ ಮುಟ್ಟಿಸದೇ ಹಾಗೆ ಹಿಂದಕ್ಕೆ ಹೋಗುತ್ತಾರೆ. ಇದನ್ನು ಗಮನಿಸಿರುವುದಿಲ್ಲ. ಒಂದು ವೇಳೆ ಬೌಲರ್ ಲಿಯಾನ್ ಕೈಗೆ ಚೆಂಡು ಸಿಕ್ಕಿ ಧೋನಿಯನ್ನು ಔಟ್ ಮಾಡಿದ್ದರೆ ಪಂದ್ಯದ ಫಲಿತಾಂಶದ ಮೇಲೆ ವ್ಯತೀರಿಕ್ತ ಪರಿಣಾಮ ಬೀರುತ್ತಿತ್ತು. ಇನ್ನು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

About the author

ಕನ್ನಡ ಟುಡೆ

Leave a Comment