ಕ್ರೀಡೆ

ಆಸೀಸ್ ವಿರುದ್ಧ ದ.ಆಫ್ರಿಕಾಗೆ ದಾಖಲೆ ಗೆಲುವು; ಸರಣಿ ಕೈವಶ

ಜೋಹಾನ್ಸ್‌ಬರ್ಗ್: ಬಾಲ್ ಟ್ಯಾಂಪರಿಂಗ್ ಸೇರಿದಂತೆ ಅನೇಕ ವಿವಾದಗಳಿಗೆ ತುತ್ತಾಗಿರುವ ಆಸ್ಟ್ರೇಲಿಯಾ ವಿರುದ್ದ ತವರಿನಲ್ಲಿ ಸಾಗಿದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 3-1ರ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಸರಣಿಯ ಮೊದಲ ಪಂದ್ಯ ಸೋತರೂ ಭರ್ಜರಿ ಕಮ್ ಬ್ಯಾಕ್ ಮಾಡಿಕೊಂಡಿರುವ ಫಾಫ್ ಡು ಪ್ಲೆಸಿಸ್ ಬಳಗ ಸ್ಮರಣೀಯ ಸರಣಿ ಗೆಲುವು ದಾಖಲಿಸಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 492 ರನ್‌ಗಳ ದಾಖಲೆಯ ಗೆಲುವು ದಾಖಲಿಸಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ನಾಲ್ಕನೇ ಅತಿ ದೊಡ್ಡ ಗೆಲುವಾಗಿದೆ. ಹಾಗೆಯೇ ಆಸೀಸ್ ದ.ಆಫ್ರಿಕಾ ದಾಖಲಿಸಿದ ಬೃಹತ್ ಗೆಲುವಾಗಿದೆ.

ಅಸಾಧ್ಯವೆಂಬ 612 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ಆಸೀಸ್ ತನ್ನ ಕೊನೆಯ ಇನ್ನಿಂಗ್ಸ್‌ನಲ್ಲಿ ವೆರ್ನಾನ್ ಪಿಲಾಂಡರ್ ದಾಳಿಗೆ ಸಿಲುಕಿ ಕೇವಲ 119 ರನ್‌ಗಳಿಗೆ ಆಲೌಟಾಗಿತ್ತು. ಮಾರಕ ದಾಳಿ ಸಂಘಟಿಸಿದ ಪಿಲಾಂಡರ್ 21 ರನ್ ತೆತ್ತು ಆರು ವಿಕೆಟುಗಳನ್ನು ಕಬಳಿಸಿದರು. ಈ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದರು.

About the author

ಕನ್ನಡ ಟುಡೆ

Leave a Comment