ಅ೦ತರಾಷ್ಟ್ರೀಯ

ಆಸ್ಕರ್​ ಪ್ರಶಸ್ತಿ ಪುರಸ್ಕೃತ ವಿಲ್​ ವಿಂಟನ್​ ಇನ್ನಿಲ್ಲ

ಅನಿಮೇಷನ್​ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿದ್ದ ವಿಲ್​ ವಿಂಟನ್​ ಇಂದು ಕೊನೆಯುಸಿರೆಳೆದಿದ್ದಾರೆ. ಮೊಯೋಮೊ (ಪ್ಲಾಸ್ಮಾ ಆಧಾರಿತ ರಕ್ತ ಕ್ಯಾನ್ಸರ್​)ನಿಂದ ಕಳೆದ 12 ವರ್ಷಗಳಿಂದ ಬಳಲುತ್ತಿದ್ದ ಅವರು ಗುರುವಾರ ಸಾವನ್ನಪ್ಪಿದ್ದಾರೆ. ವಿಂಟನ್​ ಸಾವಿನ ಸುದ್ದಿಯನ್ನು ಆತನ ಮಗ ಬಿಲ್ಡ್ರೆನ್​, ಜೆಸ್ಸೆ ಮತ್ತು ಆಲೆಕ್ಸ್​ ಫೇಸ್​ಬುಕ್​ ಖಾತೆಯಲ್ಲಿ ಪ್ರಕಟಿಸಿದ್ದಾರೆ.

70 ವರ್ಷದ ವಯಸ್ಸಿನ ವಿಂಟನ್​ ನೂರಾರು ಸಿನಿಮಾಗಳಲ್ಲಿ ಅನಿಮೇಷನ್​ ಕೆಲಸ ಮಾಡಿದ್ದು, 1975ರಲ್ಲಿ ಅವರ ಕ್ಲೋಸ್ಡ್​ ಮಂಡೆ  ಕಿರು ಚಿತ್ರಕ್ಕೆ  ಆಸ್ಕರ್​ ಪ್ರಶಸ್ತಿ ಲಭಿಸಿತ್ತು.  ರಿಪ್​ ವಾನ್​ ವಿಂಕಲ್​, ದಿ ಗ್ರೇಟ್​ ಕಾಗ್ನೀಟೊ ಮತ್ತು ದಿ ಕ್ರಿಯೆಷನ್​ ಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ವಿಲ್​ ವಿಂಟನ್​ ಸ್ಟುಡಿಯೋ ಮೂಲಕ ಹಲವು ಪ್ರತಿಭೆಗಳಿಗೂ ಅವಕಾಶವನ್ನು ಇವರು ನೀಡಿದ್ದರು,.

About the author

ಕನ್ನಡ ಟುಡೆ

Leave a Comment