ಕ್ರೀಡೆ

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರೂಸ್ ಯಾರ್ಡ್ಲಿ ನಿಧನ

ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಆಫ್ ಸ್ಪಿನ್ನರ್‌ ಬ್ರೂಸ್ ಯಾರ್ಡ್ಲಿ ಬುಧವಾರ ಬೆಳಗ್ಗೆ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ಸಂಸ್ಥೆಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಯಾರ್ಡ್ಲಿ 1978 ರಿಂದ 1983ರವರೆಗೆ 33 ಟೆಸ್ಟ್‌ ಹಾಗೂ ಏಳು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಗಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ 1982ರಲ್ಲಿ ನಡೆದ ಪಂದ್ಯದಲ್ಲಿ 10 ವಿಕೆಟ್‌ ಪಡೆದಿದ್ದರು. ಒಟ್ಟಾರೆ 126 ವಿಕೆಟ್ ಪಡೆದಿದ್ದರು. ಮಧ್ಯಮ ವೇಗದ ಬೌಲರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ನಂತರ ಆಫ್‌ ಸ್ಪಿನ್ನರ್‌ ಬೌಲರ್ ಆದರು.

About the author

ಕನ್ನಡ ಟುಡೆ

Leave a Comment