ದೇಶ ವಿದೇಶ

ಆಸ್ಟ್ರೇಲಿಯಾ ಕಡಲತೀರದಲ್ಲಿ ಮೃತಪಟ್ಟ ಇಬ್ಬರು ಭಾರತೀಯರು, ಓರ್ವ ನಾಪತ್ತೆ

ಆಸ್ಟ್ರೇಲಿಯಾ: ಸಮುದ್ರಕ್ಕೆ ಬಿದ್ದ ತಮ್ಮ ಕುಟುಂಬದ ಮಕ್ಕಳನ್ನು ರಕ್ಷಿಸಲು ನೀರಿಗೆ ಇಳಿದ ಮೂವರು ಭಾರತೀಯರಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಕಾಣೆಯಾಗಿರುವ ಘಟನೆ ಆಸ್ಟ್ರೇಲಿಯಾದ ಮೂನೀ ಬೀಚ್​ನಲ್ಲಿ ಸೋಮವಾರ ನಡೆದಿದೆ.
ಇವರೆಲ್ಲ ಹೈದರಾಬಾದ್​ ಮೂಲದವರು. ನಲ್ಗೊಂಡಾದವರಾದ ಗೌಸುದ್ದೀನ್​ (45), ಅವರ ಅಳಿಯ ಜುನಾಯಿದ್​ (28) ಹಾಗೂ ರಹತ್​ (35) ಎಂಬುವರು ಅವರದ್ದೇ ಕುಟುಂಬದ ಮಕ್ಕಳನ್ನು ರಕ್ಷಿಸಲು ನೀರಿಗೆ ಇಳಿದಿದ್ದರು. ಅವರಲ್ಲಿ ಗೌಸುದ್ದೀನ್​ ಹಾಗೂ ರಹತ್​ ಮೃತದೇಹಗಳು ಸಿಕ್ಕಿದ್ದು, ಜುನಾಯಿದ್​ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಲ್ಲಿನ ವೆಬ್​ಸೈಟ್​ ವರದಿ ಮಾಡಿದೆ.

ಸಿಡ್ನಿ ಮತ್ತು ಬ್ರಿಸ್​ಬೈನ್​ನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಕುಟುಂಬಗಳು ತಮ್ಮ ರಜಾ ದಿನಗಳನ್ನು ಕಳೆಯಲು ಮೂನೀ ಬೀಚ್​ಗೆ ತೆರಳಿದ್ದರು. ಸಂಜೆ 6 ಗಂಟೆಯಾಗುತ್ತಿದ್ದಂತೆ ಕಡಲತೀರದಲ್ಲಿ ಅಲೆಗಳ ಪ್ರಮಾಣ ಹೆಚ್ಚಾಗುತ್ತಿತ್ತು. ಆಟವಾಡುತ್ತಿದ್ದ ಮಕ್ಕಳು ಅಲೆಗಳಿಗೆ ಸಿಲುಕಿ ನೀರಿನಲ್ಲಿ ಮುಳುಗಿದಾಗ ಅವರನ್ನು ರಕ್ಷಿಸಲು ಮೂವರೂ ಸಮುದ್ರಕ್ಕೆ ಇಳಿದಿದ್ದಾರೆ. ನಂತರ ಆ ಮಕ್ಕಳನ್ನು ರಕ್ಷಣಾ ತಂಡಗಳು ಕಾಪಾಡಿವೆ ಎನ್ನಲಾಗಿದೆ.

About the author

ಕನ್ನಡ ಟುಡೆ

Leave a Comment