ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯ: ಸರಣಿ ಗೆಲ್ಲಲು ಭಾರತಕ್ಕೆ 231 ರನ್ ಗುರಿ

ಮೇಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಕಾಂಗರೊ ಪಡೆ  230 ರನ್ ಗಳಿಸಿದ್ದು,  ಭಾರತ ಸರಣಿ ಗೆಲ್ಲಲು 231 ರನ್ ಗಳ ಗುರಿ ನೀಡಿದೆ. ಲೇಗ್ ಸ್ಪೀನ್ನರ್ ಯುಜುವೇಂದ್ರ ಚಾಹಲ್ 42 ರನ್ ನೀಡಿ  ಆರು ವಿಕೆಟ್ ಪಡೆಯುವ ಮೂಲಕ ಸ್ಟಾರ್ ಆಗಿ ಮೆರೆದಾಡಿದರು. ಚಾಹೆಲ್ ತನ್ನ ಮೊದಲ ಓವರ್ ನಲ್ಲಿಯೇ ಪ್ರಮುಖ ಎರಡು ವಿಕೆಟ್ ಪಡೆದುಕೊಂಡು ಆಸೀಸ್ ಪಡೆ  ಬ್ಯಾಟಿಂಗ್ ಶಕ್ತಿ ಕುಂದಿಸಿದರು. ಶ್ಹಾನ್ ಮಾರ್ಷ  ಸ್ಟೇಂಪ್  ಔಟ್ ಆದ್ದರೆ, ಅದೇ  ಓವರ್ ನಲ್ಲಿ  ಉಸ್ಮಾನ್ ಖಾವಾಜ ಕ್ಯಾಚ್ ನೀಡಿ ನಿರ್ಗಮಿಸಿದರು.ಆಸ್ಟ್ರೇಲಿಯಾ ಪರ ಪೀಟರ್ ಹ್ಯಾಂಡ್ಸ್ ಕಾಂಬ್  58 ರನ್ ಗಳಿಸಿದದ್ದು ಹೊರತುಪಡಿಸಿದರೆ ಬೇರೆ ಯಾವೊಬ್ಬ ಆಟಗಾರರು ಅಷ್ಟು ರನ್ ಗಳಿಸಲೇ ಇಲ್ಲ.ಭಾರತೀಯ ವೇಗಿ ಭುವನೇಶ್ವರ್ ಕುಮಾರ್  ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಅಲೆಕ್ಸ್ ಕ್ಯಾರಿ ಮತ್ತು ಆರನ್ ಫಿಂಚ್ ಅವರನ್ನು ಬೇಗನೆ ಫೆವಿಲಿಯನ್ ಗೆ ಅಟ್ಟಿದರು. ವಿರಾಟ್ ಕೊಹ್ಲಿ ಕ್ಯಾರಿ ನೀಡಿದ ಕ್ಯಾಚ್ ಹಿಡಿದ್ದರೆ, ಆರನ್ ಫಿಂಚ್  ಎಲ್ ಬಿ ಡಬ್ಲ್ಯೂ ನಲ್ಲಿ ಔಟಾದರು.ಇಂದಿನ ಪಂದ್ಯದಲ್ಲಿ ಭಾರತದ ತಂಡದಲ್ಲಿ ಮೂರು ಜನ ಆಟಗಾರರು ಬದಲಾಗಿದ್ದಾರೆ. ಮೊಹಮ್ಮದ್  ಸಿರಾಜ್, ಕುಲದೀಪ್ ಯಾದವ್, ಮತ್ತು ಅಂಬಟ್ಟಿ ರಾಯುಡು ಬದಲಿಗೆ  ಚೊಚ್ಚಲ ಬಾರಿಗೆ ವಿಜಯ್ ಶಂಕರ್,  ಯುಜುವೇಂದ್ರ  ಚಾಹೆಲ್ ಹಾಗೂ ಕೇದಾರ್  ಜಾದವ್ ಆಟವಾಡುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment