ಕ್ರೀಡೆ

ಇಂಗ್ಲೆಂಡ್ ಕೌಂಟಿಯಲ್ಲಿ ಇಶಾಂತ್ ಶರ್ಮಾ

ಕಳೆದ ಜನವರಿಯಲ್ಲಿ ನಡೆದಿದ್ದ ಐಪಿಎಲ್ ಹರಾಜು ಪ್ರಕ್ರಿಯೆ ವೇಳೆ ಬಿಕರಿಯಾಗದೇ ಉಳಿದುಕೊಂಡಿದ್ದ ಭಾರತದ ವೇಗಿ ಇಶಾಂತ್ ಶರ್ಮಾ, ಇಂಗ್ಲೆಂಡ್ ಕೌಂಟಿಯಲ್ಲಿ ಭಾಗಿಯಾಗಿದ್ದು,ಬೌಲಿಂಗ್‌ ಹಾಗೂ ಬ್ಯಾಟಿಂಗ್‌‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.ಇಂಗ್ಲೆಂಡ್‌‌ನ ಸಸೆಕ್ಸ್ ಕ್ರಿಕೆಟ್ ಕ್ಲಬ್ ತಂಡದೊಂದಿಗೆ ವಾರ್ವಿಕ್‌ಶೈರ್‌  ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದ ಇಶಾಂತ್‌ ಮೊದಲ ಪಂದ್ಯದಲ್ಲಿ 5ವಿಕೆಟ್‌‌ ಕಂಬಳಿಸಿದ್ದು, ತದನಂತರ ಬ್ಯಾಟಿಂಗ್‌‌ನಲ್ಲೂ ಮೋಡಿ ಮಾಡಿದ್ದು, ನಾಲ್ಕು ಫೋರ್‌, ಒಂದು ಸಿಕ್ಸರ್‌ ಸೇರಿದಂತೆ 66ರನ್‌ಗಳಿಸಿದ್ದಾರೆ. ತದನಂತರ ಬೌಲಿಂಗ್‌ ಮಾಡಿದ ಇಶಾಂತ್‌ 2ನೇ ಇನ್ನಿಂಗ್ಸ್‌ನಲ್ಲಿ ಮತ್ತೆರೆಡು ವಿಕೆಟ್‌‌ ಕಂಬಳಿಸಿದ್ದಾರೆ. ಟೀಂ ಇಂಡಿಯಾ ಜುಲೈ ಹಾಗೂ ಸಪ್ಟೆಂಬರ್‌ ತಿಂಗಳಲ್ಲಿ ಇಂಗ್ಲೆಂಡ್‌‌ ಪ್ರವಾಸ ಕೈಗೊಳ್ಳಲಿರುವ ಕಾರಣ ಇಶಾಂತ್‌ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

About the author

ಕನ್ನಡ ಟುಡೆ

Leave a Comment