ಅ೦ತರಾಷ್ಟ್ರೀಯ

ಇಂಡೋನೇಷ್ಯದಲ್ಲಿ ಮತ್ತೆ ಭೂಕಂಪ

ಜಕಾರ್ತ: ಇಂಡೋನೇಷ್ಯಾದಲ್ಲಿ ಮತ್ತೆ ಭೂಮಿ ಕಂಪಿಸಿದ್ದು ಅವಳಿ ಭೂಕಂಪಕ್ಕೆ ಮತ್ತೆ ಜನರು ತತ್ತರಿಸಿದ್ದಾರೆ. ಸುಂಬಾ ದ್ವೀಪ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ 15 ನಿಮಿಷಗಳ ಅವಧಿಯಲ್ಲಿ 2 ಬಾರಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.9 ಮತ್ತು 6.0 ರ ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು ದಾಖಲಾಗಿದೆ. ಈ ದ್ವೀಪದಲ್ಲಿ ಸುಮಾರು 7,50,000 ಜನ ವಾಸಿಸುತ್ತಿದ್ದು, ಭೂಮಿ ಕಂಪಿಸುತ್ತಿದ್ದಂತೆ ಜನರು ಮನೆಯಿಂದ ಹೊರ ಬಂದಿದ್ದಾರೆ. ಸದ್ಯ ಯಾವುದೇ ಅವಘಡಗಳು ವರದಿಯಾಗಿಲ್ಲ.

ನಾಲ್ಕು ಬಾರಿ ಭೂಮಿ ಕಂಪಿಸಿದ ಅನುಭವವಾಯ್ತು. ಮೊದಲನೇ ಬಾರಿ ಕಂಪಿಸಿದಾಗಲೇ ಜನರು ಹೋಟೆಲ್​ ಬಿಟ್ಟು ಹೊರ ಓಡಿದರು. ನಮ್ಮ ಹೋಟೆಲ್​ನಲ್ಲಿ ಆಗ 40 ಜನರಿದ್ದರು ಎಂದು ಪ್ರತ್ಯಕ್ಷದರ್ಶಿ ಮತ್ತು ಪಡಾಡಿತ ಹೋಟೆಲ್​ ಕೆಲಸಗಾರ ತಿಳಿಸಿದ್ದಾರೆ. ಸುಲಾವೆಸಿ ದ್ವೀಪದಲ್ಲಿ ಸಂಭವಿಸಿದ್ದ ಭಾರಿ ತೀವ್ರತೆಯ ಭೂಕಂಪ ಮತ್ತು ಬಳಿಕ ಉಂಟಾದ ಸುನಾಮಿಗೆ ಬಲಿಯಾದವರ ಸಂಖ್ಯೆ ಭಾನುವಾರ 832ಕ್ಕೆ ತಲುಪಿತ್ತು. ಮೃತರ ಸಂಖ್ಯೆ 1000 ದಾಟುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ಸುನಾಮಿ ಪೀಡಿತ ಅನೇಕ ಪ್ರದೇಶಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳ ಇನ್ನೂ ತಲುಪಲು ಸಾಧ್ಯವಾಗಿಲ್ಲ.

About the author

ಕನ್ನಡ ಟುಡೆ

Leave a Comment