ಅ೦ತರಾಷ್ಟ್ರೀಯ

ಇಂಡೋನೇಷ್ಯಾ ಸುನಾಮಿ: ಮೃತರ ಸಂಖ್ಯೆ 168 ಕ್ಕೆ ಏರಿಕೆ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಶನಿವಾರ ರಾತ್ರಿ ಜ್ವಾಲಾಮುಖಿ ಸ್ಫೋಟದಿಂದಾಗಿ ಉಂಟಾದ ಭೀಕರ ಸುನಾಮಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ 168 ಕ್ಕೆ ಏರಿಕೆಯಾಗಿದೆ. ದುರಂತದಲ್ಲಿ 745 ಜನರು ಗಾಯಗೊಂಡಿದ್ದು, 30 ಜನರು ಕಾಣೆಯಾಗಿದ್ದಾರೆ ಎಂದು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ವಕ್ತಾರ ಸುತೋಪೋ ಪ್ರುವೋ ತಿಳಿಸಿದ್ದಾರೆ. ಅನಾಕ್ ಕ್ರಾಕಟೋ ಎಂಬ ಜ್ವಾಲಾಮುಖಿ ಶನಿವಾರ ರಾತ್ರಿ ಸ್ಫೋಟಗೊಂಡಿತ್ತು. ಇದರಿಂದ ರಾತ್ರಿ 9.30ರ ಸುಮಾರು (ಸ್ಥಳೀಯ ಕಾಲಮಾನ) ಸುನಾಮಿ ಅಲೆಗಳು ದಕ್ಷಿಣ ಸುಮಾತ್ರಾ ಮತ್ತು ಜಾವಾದ ಪಶ್ಚಿಮ ಭಾಗದ ತೀರ ಪ್ರದೇಶಗಳಿಗೆ ಅಪ್ಪಳಿಸಿದ್ದವು.

3 ಮೀಟರ್​ ಎತ್ತರದ ಅಲೆಗಳು ಸಮುದ್ರ ತೀರದಿಂದ ಸುಮಾರು 30 ಮೀಟರ್​ ದೂರದವರೆಗೆ ಅಪ್ಪಳಿಸಿ ತೀರದಲ್ಲಿದ್ದ ಮನೆ, ಹೋಟೆಲ್​ಗಳನ್ನು ನಾಶಪಡಿಸಿದೆ. ಜಾವಾದ ಬಾಂಟೆನ್​ ಪ್ರಾಂತ್ಯದ ಪಂಡೆಗಲಾಂಗ್​ ನಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಇಲ್ಲಿ ಇದುವರೆಗೆ 33 ಜನರು ಮೃತಪಟ್ಟಿರುವ ವರದಿಯಾಗಿದೆ ಎಂದು ಸುತೋಪೋ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment