ರಾಜ್ಯ ಸುದ್ದಿ

ಇಂದಿನಿಂದ 10 ದಿನ ಚಳಿಗಾಲ ಅಧಿವೇಶನ: ದೋಸ್ತಿ ಸರಕಾರಕ್ಕೆ ಅಗ್ನಿಪರೀಕ್ಷೆ

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರದಿಂದ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಅತಂತ್ರದ ಸವಾಲನ್ನು ಎದುರಿಸುತ್ತಲೇ ಇರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಈ ವಿಧಾನಮಂಡಲ ಅಧಿವೇಶ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಈಗಾಗಲೇ ಬಿಜೆಪಿ ಸಕಲ ಸಿದ್ಧತೆಗಳನ್ನು ನಡೆಸಿದ್ದು,  ಸಾಲ ಮನ್ನಾ, ಬರ ಪರಿಹಾರ, ಕಬ್ಬಿನ ಬಾಕಿ, ರೈತರ ವಿವಿಧ ಸಮಸ್ಯೆ ಮುಂತಾದ ಅಂಶಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿದೆ. ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ಬಳಿಕ ಆರು ತಿಂಗಳುಗಳಲ್ಲಿ 3 ಅಧಿವೇಶನಗಳುನ್ನು ಎದುರಿಸಿದ್ದು, ಆರಂಭದ ಅಧಿವೇಶನಗಳಲ್ಲಿ ಸರ್ಕಾರದ ಸಾಧನೆಗೆ ಸಮಯಬೇಕೆಂದು ಸಬೂಬು ಹೇಳುತ್ತಿದ್ದರು. ಇದರಿಂದ ಪ್ರತಿಪಕ್ಷಗಳನ್ನು ಕಟ್ಟು ಹಾಕುವಂತೆ ಮಾಡಲಾಗಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ಇದೀಗ ಪ್ರತಿಪಕ್ಷಗಳು ಸಿದ್ಧವಾಗಿ ನಿಂತಿವೆ.

About the author

ಕನ್ನಡ ಟುಡೆ

Leave a Comment