ರಾಜ್ಯ ಸುದ್ದಿ

ಇಂದಿರಾ ಕ್ಯಾಂಟೀನ್ ಗಳಲ್ಲಿ ಜನವರಿಯಿಂದ ಕಾಫಿ, ಟೀ ಲಭ್ಯ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್

ಬೆಂಗಳೂರು:  ಇಂದಿರಾ ಕ್ಯಾಂಟೀನ್ ಗಳಲ್ಲಿ ಜನವರಿಯಿಂದ ಕಾಫಿ, ಟೀ  ಕೊಡಲು ಬಿಬಿಎಂಪಿ ನಿರ್ಧರಿಸಿರುವುದಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನವರಿಯಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ  ಕಾಫಿ, ಟೀ, ಲಭ್ಯವಾಗಲಿದೆ ಎಂದರು. ಈಗಾಗಲೇ ಬೆಳಗಿನ ವೇಳೆ 5 ರೂಪಾಯಿಗೆ ತಿಂಡಿ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ಐದು ರೂಪಾಯಿಗೆ ಟಿ ಅಥವಾ ಕಾಫಿ ಜೊತೆಗೆ ವಡಾ ನೀಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರಿಂದ ಬಂದ ಸಲಹೆ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪರಮೇಶ್ವರ್  ತಿಳಿಸಿದರು.

About the author

ಕನ್ನಡ ಟುಡೆ

Leave a Comment