ರಾಷ್ಟ್ರ ಸುದ್ದಿ

ಇಂದಿರಾ ಗಾಂಧಿ 34ನೇ ಪುಣ್ಯತಿಥಿ: ರಾಹುಲ್, ಸೋನಿಯಾ, ಮನಮೋಹನ್ ಸಿಂಗ್’ರಿಂದ ಪುಷ್ಪ ನಮನ

ನವದೆಹಲಿ: ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ 34ನೇ ಪುಣ್ಯತಿಥಿ ದಿನವಾದ ಬುಧವಾರ ಇಲ್ಲಿನ ಶಕ್ತಿ ಸ್ಥಳದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗೌರವ ಸಲ್ಲಿಸಿದರು.
ಶಕ್ತಿ ಸ್ಥಳದಲ್ಲಿರುವ ಮಾಜಿ ಪ್ರಧಾನಿ ಇಂದಿರಾ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಇಂದಿರಾ ಗಾಂಧಿಯವರ ಪುಣ್ಯತಿಥಿ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಅಜ್ಜಿಯನ್ನು ನೆನಪಿಸಿಕೊಳ್ಳುತ್ತಿದ್ದೇವೆ. ನನ್ನ ಅಜ್ಜಿ ಸಾಕಷ್ಟು ಹೇಳಿಕೊಟ್ಟಿದ್ದರು. ಅಂತ್ಯವಿಲ್ಲದ ಪ್ರೀತಿಯನ್ನು ನೀಡಿದ್ದರು. ಜನರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದರು. ಅವರೆಂದರೆ ನನಗೆ ಬಹಳ ಹೆಮ್ಮೆ ಎಂದು ಹೇಳಿಕೊಂಡಿದ್ದಾರೆ. ಇದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ಟ್ವೀಟ್ ಮಾಡಿದ್ದು, ಮಿ.ಇಂದಿರಾ ಗಾಂಧಿಯರ ಪುಣ್ಯತಿಥಿ ಹಿನ್ನಲೆಯಲ್ಲಿ ನಮನಗಳನ್ನು ಸಲ್ಲಿಸುತ್ತೇನೆಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment