ದೇಶ ವಿದೇಶ

ಇಂದು ತಾಯ್ನಾಡಿಗೆ ಮರಳಲಿರುವ ಭಾರತದ ವೀರಪುತ್ರ ಅಭಿನಂದನ್

ಹೊಸದಿಲ್ಲಿ: ಭಾರತದ ವಿಂಗ್ ಕಮಾಂಡರ್‌ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿ ಭಾರತಕ್ಕೆ ಹಸ್ತಾಂತರಿಸುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ ಹಿನ್ನೆಲೆಯಲ್ಲಿ ಅಭಿನಂದನ್ ಆಗಮನವನ್ನು ದೇಶ ಕುತೂಹಲದಿಂದ ನಿರೀಕ್ಷಿಸುತ್ತಿದೆ. ಭಾರತದ ರಾಜತಾಂತ್ರಿಕ ಹಾಗೂ ರಣತಾಂತ್ರಿಕ ಒತ್ತಡಕ್ಕೆ ಮಣಿದ ಪಾಕ್‌ ‘ಶಾಂತಿಯ ಸಂಕೇತ’ವಾಗಿ ಅಭಿನಂದನ್ ಅವರನ್ನು ಶುಕ್ರವಾರ ಬಿಡುಗಡೆ ಮಾಡಿ ಕಳುಹಿಸುವುದಾಗಿ ಗುರುವಾರ ಘೋಷಿಸಿತ್ತು.

‘ಭಾರತದ ಪೈಲಟ್‌ ನಮ್ಮ ವಶದಲ್ಲಿದ್ದಾರೆ. ಮಾತುಕತೆಯ ಹಾದಿ ತೆರೆದುಕೊಳ್ಳಲು ಪೂರಕವಾಗಿ ಹಾಗೂ ಶಾಂತಿಯ ಸಂಕೇತವಾಗಿ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ನಾನು ಘೋಷಿಸುತ್ತೇನೆ’ ಎಂದು ಇಮ್ರಾನ್ ಖಾನ್‌ ಪಾಕ್ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಘೋಷಿಸಿದ್ದರು. ಅಭಿನಂದನ್ ಅವರು ಮಧ್ಯಾಹ್ನ 1 ಗಂಟೆ ವೇಳೆ ಗಡಿ ದಾಟಿ ತಾಯ್ನಾಡಿಗೆ ಮರಳಿ ಪ್ರವೇಶಿಸುವ ನಿರೀಕ್ಷೆಯಿದೆ. ಭಾರತೀಯ ಹೈಕಮಿಷನ್‌ ವಶಕ್ಕೆ ಅವರನ್ನು ಪಾಕ್ ಸೇನೆ ಹಸ್ತಾಂತರಿಸಲಿದೆ.

ಭಾರತದ ವಾಯುಪ್ರದೇಶ ಪ್ರವೇಶಿಸಿದ್ದ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವನ್ನು ಬೆನ್ನಟ್ಟಿ ಹೋಗಿದ್ದ ಅಭಿನಂದನ್‌ ಅವರ ಮಿಗ್‌ 21 ವಿಮಾನವನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೊಡೆದುರುಳಿಸಲಾಯಿತು. ಆಗ ಅಭಿನಂದನ್ ಪ್ಯಾರಾಚೂಟ್ ಮೂಲಕ ಹೊರ ಜಿಗಿದು ಪಿಓಕೆ ನೆಲದಲ್ಲಿ ಇಳಿದರು. ಅವರನ್ನು ಸ್ಥಳೀಯರು ಸುತ್ತುವರಿದು ಹಿಂಸಿಸಿ ಪಾಕ್ ಸೇನೆ ವಶಕ್ಕೆ ಒಪ್ಪಿಸಿದರು ಎಂದು ಮೂಲಗಳು ಹೇಳಿವೆ.

About the author

ಕನ್ನಡ ಟುಡೆ

Leave a Comment