ರಾಜ್ಯ ಸುದ್ದಿ

ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಗಳೂರಿಗೆ

ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್  ಲಾಲ್ ಬುಧವಾರ ಮಂಗಳೂರಿಗೆ ಆಗಮಿಸಲಿದ್ದು, ನಗರದ ಸಂಘನಿಕೇತನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೈಠಕ್​ನಲ್ಲಿ ಭಾಗವಹಿಸಲಿದ್ದಾರೆ.

ಸಂಘನಿಕೇತನದಲ್ಲಿ ನ.11ರಿಂದ ಪಶ್ಚಿಮ ಮತ್ತು ದಕ್ಷಿಣ ಭಾರತದ ರಾಜ್ಯಗಳ ಆರ್​ಎಸ್​ಎಸ್ ಪ್ರಚಾರಕರ ಐದು ದಿನಗಳ ಅಭ್ಯಾಸ ವರ್ಗ ನಡೆಯುತ್ತಿದೆ. ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ಗೋವಾ, ತಮಿಳುನಾಡಿನ 200ಕ್ಕೂ ಅಧಿಕ ಪ್ರಮುಖ ಪ್ರಚಾರಕರು ಭಾಗವಹಿಸಿದ್ದಾರೆ. ಆರ್​ಎಸ್​ಎಸ್ ಸರ ಕಾರ್ಯವಾಹ ಸುರೇಶ್ ಜೋಷಿ, ಸಹ ಸರ ಕಾರ್ಯವಾಹ ಮುಕುಂದ್ ಅಭ್ಯಾಸ ವರ್ಗದ ನೇತೃತ್ವ ವಹಿಸಿದ್ದಾರೆ. ಇದೇ ಅವಧಿಯಲ್ಲಿ ಸರ ಸಂಘಚಾಲಕ ಮೋಹನ್ ಭಾಗವತ್ ನೇತೃತ್ವದಲ್ಲಿ ಉತ್ತರ ಹಾಗೂ ಪೂರ್ವ ಭಾರತದ ರಾಜ್ಯಗಳ ಪ್ರಚಾರಕರ ಅಭ್ಯಾಸ ವರ್ಗ ವಾರಾಣಸಿಯಲ್ಲಿ ನಡೆಯುತ್ತಿದೆ. ಈ ಅಭ್ಯಾಸ ವರ್ಗದ ಬೈಠಕ್​ನಲ್ಲಿ ಭಾಗವಹಿಸಿರುವ ಅಮಿತ್ ಷಾ ಈಗ ಪಶ್ಚಿಮ ಮತ್ತು ದಕ್ಷಿಣ ಭಾರತದ ರಾಜ್ಯಗಳ ಪ್ರಮುಖರ ಬೈಠಕ್​ನಲ್ಲಿ ಭಾಗವಹಿಸಲು ಮಂಗಳೂರಿಗೆ ಬರುತ್ತಿದ್ದಾರೆ.

ರಾಮ ಮಂದಿರ ನಿರ್ಮಾಣ ಚರ್ಚೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣ, ಮುಂದಿನ ಲೋಕಸಭಾ ಚುನಾವಣೆ ಮತ್ತು ಆರ್​ಎಸ್​ಎಸ್​ನ ಸಾಮಾಜಿಕ ಚಟುವಟಿಕೆ ಬಗ್ಗೆ ಬೈಠಕ್​ನಲ್ಲಿ ಚಿಂತನ-ಮಂಥನ ನಡೆಯಲಿದೆ.

About the author

ಕನ್ನಡ ಟುಡೆ

Leave a Comment