ರಾಜಕೀಯ

ಇಂದು ಮಧ್ಯಾಹ್ನ ಜಗ್ಗೇಶ್ ನಾಮಪತ್ರ ಸಲ್ಲಿಕೆ

ಬೆಂಗಳೂರು: ನವಸರ ನಾಯಕ ಜಗ್ಗೇಶ್ ಯಶವಂತ ಪುರ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.ಈ ಬಗ್ಗೆ ಸ್ವತಃ ಜಗ್ಗೇಶ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.ಇಂದು  ಮಧ್ಯಾಹ್ನ 12:30 ಕ್ಕೆ ಹೇರೋಹಳ್ಳಿ ಎಆರ್ ಒ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತಿರುವೆ.ಇರಲಿ ನಿಮ್ಮೆಲ್ಲರ ಶುಭ ಹಾರೈಕೆ ಈ ಪಾಮರನ ಮೇಲೆ ಸಾಧ್ಯವಾದರೆ ಬನ್ನಿ ಬಂಧುಗಳೇ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಕೊನೆಯ ಕ್ಷಣದಲ್ಲಿ ಬಿಜೆಪಿ ಜಗ್ಗೇಶ್ ಗೆ ಯಶವಂತಪುರ ಕ್ಷೇತ್ರದ ಟಿಕೆಟ್ ನೀಡಿತ್ತು.ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಎಂಎಲ್ ಸಿಯಾಗಿದ್ದ ಜಗ್ಗೇಶ್ ಇದೀಗ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗಿಳಿದ್ದಾರೆ.

About the author

ಕನ್ನಡ ಟುಡೆ

Leave a Comment