ದೇಶ ವಿದೇಶ

ಇಂದು ಮೋದಿ-ಶಿಂಜೋ ಭೇಟಿ

ನವದೆಹಲಿ: ಭಾರತ ಹಾಗೂ ಜಪಾನ್ ನಡುವಿನ ವಾರ್ಷಿಕ ಶೃಂಗದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಜಪಾನ್​ಗೆ ತೆರಳಿದ್ದು, ಭಾನುವಾರ ಹಾಗೂ ಸೋಮವಾರ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಏಷ್ಯಾದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಭಾವ ನಿಯಂತ್ರಣ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ರಕ್ಷಣೆ, ಸಾರಿಗೆ, ಮೂಲಸೌಕರ್ಯ, ಸಹಕಾರ ಕುರಿತು ಮಾತುಕತೆ ನಡೆಯುವ ಸಾಧ್ಯತೆಯಿದೆ. ಮೋದಿ ಹಾಗೂ ಶಿಂಜೋ ಅಬೆ ನಡುವಿನ 12ನೇ ಭೇಟಿ ಇದಾಗಿದೆ.

ಭಾರತದ ನಂಬಿಕೆಯ ಮಿತ್ರ ಜಪಾನ್. ಶೃಂಗದಲ್ಲಿ ಉಭಯ ದೇಶಗಳ ಅಭಿವೃದ್ಧಿಗೆ ಪೂರಕವಾದ ಮಹತ್ವದ ಚರ್ಚೆ ನಡೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಶನಿವಾರ ರಾತ್ರಿಯೇ ಜಪಾನ್​ಗೆ ತೆರಳಿರುವ ಪ್ರಧಾನಿ ಮೋದಿ, ಭಾರತೀಯರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಜಪಾನ್ ಪ್ರಧಾನಿಯ ರಜಾಕಾಲೀನ ತಾಣ ಯಮನಶಿಯಲ್ಲಿ ಮೋದಿಗೆ ವಿಶೇಷ ಔತಣಕೂಟ ಆಯೋಜಿಸಲಾಗಿದೆ. ಜಪಾನ್​ನ ಆಡಳಿತ ಪಕ್ಷದ ಸಂಸದರು ಹಾಗೂ ಸರ್ಕಾರದ ಹಿರಿಯ ಪ್ರತಿನಿಧಿಗಳು ಈ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಯಮನಶಿಯಲ್ಲಿ ಔತಣಕೂಟ ಪಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಮುಖಂಡ ಎಂಬ ಖ್ಯಾತಿಗೆ ಮೋದಿ ಪಾತ್ರರಾಗಿದ್ದಾರೆ.

About the author

ಕನ್ನಡ ಟುಡೆ

Leave a Comment