ರಾಜ್ಯ ಸುದ್ದಿ

ಇಂದು ವೈಕುಂಠ ಏಕಾದಶಿ ಇಸ್ಕಾನ್ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬೆಂಗಳೂರು: ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರಸಿದ್ಧ ಇಸ್ಕಾನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ಬೆಳಗ್ಗೆ 3.45ರಿಂದಲೇ ಪೂಜೆ ಪ್ರಾರಂಭವಾಗಿದ್ದು, ಪಲ್ಲಕ್ಕಿ ಉತ್ಸವದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಕರೆತರಲಾಗಿದೆ. ಈ ವೇಳೆ ಕೈಯಲ್ಲಿ ದೀಪ ಹಿಡಿದ ಮುತ್ತೈದೆಯರು ಉತ್ಸವಕ್ಕೆ ಸ್ವಾಗತ ಕೋರಿದರು. 6 ಗಂಟೆಗೆ ಇಸ್ಕಾನ್ ದೇವಸ್ಥಾನದ ದ್ವಾರವನ್ನು ತೆರೆಯಲಾಗಿದೆ. ದೇವರ ಸಮ್ಮುಖದಲ್ಲಿ ವೈಕುಂಠ ಬಾಗಿಲನ್ನು ತೆರೆಯಲಾಗಿದ್ದು, ವಿವಿಧ ಹೂಗಳ ಅಲಂಕಾರದಲ್ಲಿ ಕೃಷ್ಣ-ರಾಧೆ ಕಂಗೊಳಿಸುತ್ತಿದ್ದಾರೆ. ದೇವರನ್ನು ಕಣ್ತುಂಬಿಕೊಳ್ಳಲು ಬೆಳಗ್ಗೆಯಿಂದಲೇ ಭಕ್ತರು ಆಗಮಿಸುತ್ತಿದ್ದಾರೆ. ವೈಕುಂಠ ಏಕಾದಶಿಯಂದು ತಿಮ್ಮಪ್ಪನ ದರ್ಶನ ಪಡೆದರೆ ಮೋಕ್ಷ ಪ್ರಾಪ್ತಿ ಆಗುತ್ತೆ ಎಂಬ ನಂಬಿಕೆ ಜನರಲ್ಲಿದೆ.

About the author

ಕನ್ನಡ ಟುಡೆ

Leave a Comment