ರಾಜ್ಯ ಸುದ್ದಿ

ಇಂದು ಸಂಜೆ 5.20ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ

ಬೆಂಗಳೂರು: ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡುವುದರ ಜತೆಗೆ ಸಂಪುಟದಲ್ಲಿ ಖಾಲಿ ಇದ್ದ 6 ಸ್ಥಾನಗಳ ಭರ್ತಿಗೆ ತೀರ್ಮಾನ ಆಗಿರುವುದರಿಂದ ಈಗ ಒಟ್ಟು 8 ಮಂದಿ ಹೊಸಬರು ಸೇರ್ಪಡೆಗೆ ಅವಕಾಶ ದೊರೆತಿದೆ. ರಮೇಶ್‌ ಜಾರಕಿಹೊಳಿ ಸ್ಥಾನಕ್ಕೆ ಅವರ ಸಹೋದರ ಸತೀಶ ಜಾರಕಿಹೊಳಿ, ಆರ್‌.ಶಂಕರ್‌ ಸ್ಥಾನಕ್ಕೆ ಕುಂದಗೋಳು ಶಾಸಕ ಕುರುಬ ಸಮುದಾಯ ಸಿ.ಎಸ್‌.ಶಿವಳ್ಳಿ ನೇಮಕಗೊಳ್ಳಲಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ಶಾಸಕರಾದ ವಾಲ್ಮೀಕಿ ಸಮುದಾಯದ ಇ. ತುಕಾರಾಂ, ಲಂಬಾಣಿ ಸಮುದಾಯದ ಹಡಗಲಿಯ ಬಿ.ಟಿ.ಪರಮೇಶ್ವರ್‌ ನಾಯಕ್‌, ಮುಸ್ಲಿಂ ಕೋಟಾದಲ್ಲಿ ಬೀದರ್‌ನ ರಹೀಂ ಖಾನ್‌, ಕುರುಬ ಸಮುದಾಯದ ಹೊಸಕೋಟೆಯ ಎಂ.ಟಿ.ಬಿ.ನಾಗರಾಜ್‌ ಹಾಗೂ ಮೇಲ್ಮನೆ ಸದಸ್ಯರಾದ ಪರಿಶಿಷ್ಟ ಜಾತಿಯ ಎಡಗೈ ಗುಂಪಿನ ಆರ್‌.ಬಿ.ತಿಮ್ಮಾಪುರ ಅವರಿಗೆ ಅದೃಷ್ಟ ಒಲಿದಿದೆ. ಮುಖ್ಯ ಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ಒಕ್ಕಲಿಗ ಸಮುದಾಯದ ಶಿಡ್ಲಘಟ್ಟದ ವಿ. ಮುನಿಯಪ್ಪ, ದಿಲ್ಲಿ ವಿಶೇಷ ಪ್ರತಿನಿಧಿಯಾಗಿ ಜೇವರ್ಗಿಯ ಡಾ. ಅಜಯ್‌ ಸಿಂಗ್‌, 8 ಮಂದಿ ಸಂಸದೀಯ ಕಾರ್ಯದರ್ಶಿಗಳು, 20 ಮಂದಿ ಶಾಸಕರನ್ನು ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಿಸಲಾಗುತ್ತಿದೆ.

ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ಸಂಜೆ 5.20ಕ್ಕೆ ರಾಜಭವನದಲ್ಲಿ ನಡೆಯಲಿದೆ. ಶಿವಳ್ಳಿ, ಎಂಟಿಬಿ ನಾಗರಾಜ್, ತುಕಾರಾಂ, ಎಂ.ಬಿ.ಪಾಟೀಲ್, ಪರಮೇಶ್ವರ ನಾಯಕ್, ಸತೀಶ್ ಜಾರಕಿಹೊಳಿ, ತಿಮ್ಮಾಪುರ, ರಹೀಂ ಖಾನ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

About the author

ಕನ್ನಡ ಟುಡೆ

Leave a Comment