ದೇಶ ವಿದೇಶ

ಇಚ್ಛಾಶಕ್ತಿಗಳ ಸ್ವಾಥ೯ ರಾಜಕಾರಣ,  ಅವಕಾಶಕ್ಕಾಗಿ ಯುವಜನತೆ!

Written by Admin

ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ರಾಜಕೀಯ ರಂಗದಲ್ಲಿ ಯುವನಾಯಕತ್ವದ ಕೊರತೆ ಎದ್ದುಕಾಣುತ್ತಿದೆ ಕಾರಣ ರಾಜಕೀಯ ಪಕ್ಷಗಳಲ್ಲಿ ಸೂಕ್ತ ವ್ಯಕ್ತಿ ಹಾಗೂ ವ್ಯಕ್ತಿತ್ವಕ್ಕೆ , ರಾಷ್ಟ್ರಾಭಿಮಾನಿಗಳಿಗೆ ಸಮಾಜದ ಸವ೯ತೋಮುಖ ಅಭಿವೃದ್ಧಿಗಾಗಿ ಶ್ರಮಿಕರ ಪರ ಶ್ರಮಪಡುವ ಮನಸುಗಳಿಗೆ ನಿಲ೯ಕ್ಷ್ಯ ಮಾಡುವುದರಿಂದಲೇ ಕೆಲವೊಂದು ರಾಷ್ಟ್ರೀಯ ಪಕ್ಷಗಳು ಗ್ರಾಮೀಣ ಭಾಗದ ಜನಸಾಮಾನ್ಯನಲ್ಲಿ ಬಂಡವಾಳಶಾಹಿ ರಾಜಕಾರಣ ಎಂಬಂತೆ ಗೋಚರಿಸುವ ಹಾಗೆ ನಡೆದುಕೊಳ್ಳುತ್ತಿವೆ.

ಪ್ರಜಾಪ್ರಭುತ್ವದ ಆಶಯವನ್ನು ಇಂದಿಗೂ ಜೀವಂತವಾಗಿಡುವಲ್ಲಿ ಕೆಲವೇ ಜನ ಪ್ರಾಮಾಣಿಕ ವ್ಯಕ್ತಿಗಳು ಮಾತ್ರ ನಮ್ಮ ದೇಶದ ರಾಜಕಾರಣದಲ್ಲಿದ್ದಾರೆ. ಯುವನಾಯಕತ್ವಕ್ಕೆ ಸರಿಯಾದ ಮನ್ನಣೆ ಹಾಗೂ ಪ್ರೇರಣೆ ಸಿಕ್ಕಲ್ಲಿ ಮಾತ್ರ ಖಂಡಿತವಾಗಿಯೂ ಈ ದೇಶದ ರಾಜಕಾರಣ ಹಾಗೂ ರಾಜಕೀಯ ರಂಗ ಪರಿಶುದ್ಧವಾಗಿ ಇಡೀ ನಾಗರಿಕ ಸಮಾಜದ ದೃಷ್ಟಿಕೋನದಲ್ಲಿ ಬದಲಾವಣೆ ಕಾಣಬಹುದು ಎಂದು ನನ್ನ ಅಭಿಲಾಷೆ.

ವಿಶೇಷವಾಗಿ ಈ ರಾಜ್ಯದ ರಾಜಕಾರಣ ಹಾಗೂ ರಾಜಕೀಯ ವ್ಯವಸ್ಥೆ ಬಗ್ಗೆ ಹೇಳಹೊರಟರೆ ತೀರಾ ರೋಮಾಂಚನಕಾರಿ ಸತ್ಯವನ್ನು ತೆಗೆದು ಬಯಲಿಗಿಡಬೇಕಾಗುತ್ತದೆ. ಪ್ರಸ್ತುತ ಈ ರಾಜ್ಯದ ಸಿಎಂ ತನ್ನ ಸಕಾ೯ರ ರಚನೆಗೆ ಬೇಕಾದ ಸಾವಿರ ಕೋಟಿ ರೂಪಾಯಿಗಳನ್ನು ತರಲು ಒಬ್ಬ ಉದ್ಯಮಿಯ ಮುಂದೆ ಮಂಡೆಯೂರಿ,  ತಲೆಬಾಗಿದ್ದನ್ನು ಸ್ಮರಿಸಿಕೊಳ್ಳಬಹುದು,  ಸಾಮಾಜಿಕ ನ್ಯಾಯ ಘೋಷದಡಿ ಸಕಾ೯ರ ರಚಿಸಿದ ಅದೇ ವ್ಯಕ್ತಿ ಇಂದು ಯಾವುದೋ ಒಂದು ವಗ೯ವನ್ನು ಮಾತ್ರ ಓಲೈಕೆ ಮಾಡಿಕೊಳ್ಳುವಲ್ಲಿ ಹೆಣಗಾಡುತ್ತಿರುವುದು ತೀರಾ ದಾರಿದ್ರ್ಯದ ವಿಷಯ.

ಕೇವಲ ಒಂದು ಇಚ್ಛಾಶಕ್ತಿ ಪ್ರಭಾವಕ್ಕೆ ಮಣಿದು ಇನ್ನಾರನ್ನೋ ಎದುರುಹಾಕಿಕೊಂಡು "ಹಿಂದುಳಿದ ಸಕಾ೯ರ" ಎಂಬಂತೆ ಬಿಂಬಿಸುತ್ತಾ ಕಡುಬಡವರನ್ನೇ ನಿಲ೯ಕ್ಷ್ಯಮಾಡಿ ವಾಮಮಾಗ೯ದಿಂದ ಹಣಲೂಟಿಗೈಯ್ಯೋದೇ ಏಕಮಾತ್ರ ಗುರಿ ಎಂಬಂತೆ ವತಿ೯ಸುತ್ತಿರುವುದು ನಾಚಿಕೆಗೀಡು ಪ್ರಸಂಗ.

ತನ್ನ ಭವಿಷ್ಯದ ಖಬರಿಲ್ಲದ ವ್ಯಕ್ತಿ ಕ್ಷಣಿಕ ಮನತೃಪ್ತಿಗಾಗಿ ಬುದ್ಧಿಗೇಡಿ ರಾಜನೀತಿ ಅನುಸರಿಸುತ್ತಿರುವುದು ಖಂಡನೀಯ. ಕುತಂತ್ರ

ಬುದ್ಧಿಯುಳ್ಳವರನ್ನು ತಮ್ಮ ಸಲಹೆಗೆ ಇಟ್ಟುಕೊಂಡರೆ ಅವರೆಂಥಹ ಸಲಹೆ ಮಾಡಿಯಾರು ನೀವೆ ಊಹಿಸಿ. ಬಂಧುಗಳೇ, ಎಲ್ಲಾ ವಗ೯ದಲ್ಲೂ ಕಡುಬಡವರಿದ್ದಾರೆ. ಕಡುಬಡವನ ಹಿಡಿಶಾಪ ತಟ್ಟದೇ ಇರದು. ಇಡೀ ರಾಜ್ಯದ ಮತದಾರರಿಂದ ರಚಿತವಾದ

ಸಕಾ೯ರ ಈಗ ಕೇವಲ ಒಂದು ಧಮೀ೯ಯರಿಗೆ, ವಗ೯ಕ್ಕೆ ಸೀಮಿತಗೊಳಿಸುವುದು ಸಾಮಾಜಿಕ ಕ್ರಾಂತಿಗೆ ಎಡೆಮಾಡಿಕೊಟ್ಟಂತೆ. ಈ ಪರಿಣಾಮ ಸಿಎಂ ಸಿದ್ದರಾಮಯ್ಯ ತನ್ನ ಭವಿಷ್ಯದ ರಾಜಕಾರಣ ಜೀವನ ಇಲ್ಲಿಗೆ ಮುಗಿಸಿದ ಹಾಗೆ ಗೋಚರಿಸುವ ಹಾಗೆ ಉಪಸಂಹಾರ ಬರೆದುಬಿಡಬೇಕಾಗುತ್ತದೆಯಲ್ಲವೇ?

ಕೇವಲ ಒಂದು ಬಾರಿ ಸಿಎಂ ಆಗಬೇಕೆಂಬ ಹಪಾಹಪಿಗೆ ಹಾತೊರೆದು ಅವಸರದಲ್ಲಿ ತಿಂದ ಅನ್ನ ಅರಗದೇ ಎದೆಯಲ್ಲಿ ಕುಳಿತಹಾಗೆ ಅಥ೯ವಿಲ್ಲದ ರಾಜಕೀಯ ರಂಗ ಬಳಸಿಕೊಂಡು ಸಾಮಾನ್ಯ ಜನತೆ ಹಾಗೂ ಕಟ್ಟಕಡೆಯ ಬಡವನ ನೋವು, ಕೂಗನ್ನು ಕೇಳದೇ ಉಡಾಫೆ ಮಾಡುತ್ತಾ ಕಾಲಹರಣ ಮಾಡಿ ಮತ್ತೆ ಚುನಾವಣೆಗಳು ಬಂದಾಗ ಮಾತ್ರ ಜಾತಿ ಬೆಂಬಲ, ಹಣಬಲ, ತೋಳ್ಬಲ ಪ್ರದಶಿ೯ಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕುಗ್ಗಿಸುವಂತಹ ತೀರಾ ಕೆಳಮಟ್ಟದ ಅಧಿಕಾರ ವ್ಯಾಮೋಹಿ ರಾಜನೀತಿಯ ಹಾದಿ ಹಿಡಿದು ಆತ್ಮವಿಮರ್ಶೆಯೂ ಮಾಡಿಕೊಳ್ಳದ ಮನಸ್ಸು ಆತ್ಮಸಂತೃಪ್ತಿ ಕಾಣದೇ, ನೈತಿಕ ಸಾಮಥ್ಯ೯ ಕುಗ್ಗಿ, ಆತ್ಮಗೌರವವೂ ಕಳೆದುಕೊಂಡು ಸಾಮಾಜಿಕವಾಗಿ ಕಿಂಚಿತ್ತೂ ಬೆಲೆಕಾಣದ ನಾಣ್ಯವಾಗಿಬಿಡುತ್ತದೆ. ಅಂತಿಮವಾಗಿ ಒಂದು ಮುಖ್ಯವಾದ ಅಂಶವೆಂದರೆ ಕೇವಲ ಒಂದು ಜಾತಿ, ವಗ೯, ಧಮ೯ ಓಲೈಕೆಗಾಗಿ ಹುಟ್ಟಿಕೊಂಡಂತಹ ರಾಜಕೀಯ ಪಕ್ಷವಾಗಲೀ,  ಇಚ್ಛಾಶಕ್ತಿಯಾಗಲೀ , ವ್ಯಕ್ತಿಯಾಗಲಿ, ಸಿದ್ಧಾಂತವಾಗಲಿ ಕೇವಲ ಒಂದು ಬಾರಿ ಅವಕಾಶ ಪಡೆಯಬಹುದೇ ಹೊರತು ಅದಕ್ಕೆ ಭವಿಷ್ಯವಿಲ್ಲ ಎಂಬುದು ನನ್ನ ಸ್ಪಷ್ಟ ನಿಲುವು.

VEERESH NADAGOUDAR

About the author

Admin

Leave a Comment