ಸಿನಿ ಸಮಾಚಾರ

ಇಟಾಲಿಯಲ್ಲಿ ದೀಪಿಕಾ ಪಡುಕೋಣೆ-ರಣ್ ವೀರ್ ಸಿಂಗ್ ವಿವಾಹ

ಬಾಲಿವುಡ್ ನ ಸ್ಟಾರ್ ನಟರಾದ  ದೀಪಿಕಾ ಪಡುಕೋಣೆ-ರಣ್ ವೀರ್ ಸಿಂಗ್ ವಿವಾಹ ಇಟಾಲಿಯಲ್ಲಿ ನಡೆದಿದೆ.
ಎಎನ್ಐ ವರದಿಯ ಪ್ರಕಾರ ಕುಟುಂಬ ಸದಸ್ಯರು ಹಾಗೂ ಆಪ್ತ ವರ್ಗದ ಸಮ್ಮುಖದಲ್ಲಿ ಇಟಾಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದಾರೆ.
ಇದಕ್ಕೂ ಮುನ್ನ ನ.13 ರಂದು ಮೆಹಂದಿ ಸಂಗೀತ್ ಕಾರ್ಯಕ್ರಮ ನಡೆದಿದೆ. ಕ್ಯಾಸ್ಟಾಡಿವಾ ರೆಸಾರ್ಟ್ ನಲ್ಲಿ ವಿವಾಹ ನಡೆದಿದ್ದು, ಇದೇ ವೇಳೆ ವಿವಾಹವಾದ ರೆಸಾರ್ಟ್ ನಲ್ಲಿ ವಿಶ್ವನಾಯಕರ ಭೇಟಿಯೂ ಇದ್ದಿದ್ದರಿಂದ ಬಿಗಿ ಭದ್ರತೆಯನ್ನೂ ಒದಗಿಸಲಾಗಿತ್ತು. ಲೇಕ್ ಕೊಮೊದಲ್ಲಿಯೂ ಸಹ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಪತ್ರಕರ್ತರನ್ನೂ ಸಹ ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು ಎಂದು ಎಎನ್ಐ ಪತ್ರಕರ್ತರೊಬ್ಬರು ವರದಿಯಲ್ಲಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment