ರಾಜಕೀಯ ರಾಜ್ಯ

ಇದೇ ಮೊದಲ ಬಾರಿ ಮತದಾನಕ್ಕೆ ಬಳಸಲಾಗುತ್ತಿರುವ “ಮಾರ್ಕ್‌-3′ ಇವಿಎಂಗಳ ಪೂರೈಕೆ

ಬೆಂಗಳೂರು: ದೇಶದಲ್ಲಿ ಇದೇ ಮೊದಲ ಬಾರಿ ಮತದಾನಕ್ಕೆ ಬಳಸಲಾಗುತ್ತಿರುವ “ಮಾರ್ಕ್‌-3′ ತಂತ್ರಜ್ಞಾನದ ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷೀನ್‌ಗಳು (ಇವಿಎಂ) ಶುಕ್ರವಾರ ಚುನಾವಣಾ ಆಯೋಗಕ್ಕೆ ಪೂರೈಕೆಯಾಗಲಿವೆ.

ಭಾರತ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ (ಬಿಇಎಲ್‌) ಸಂಸ್ಥೆ ಮಾರ್ಕ್‌-3 ತಂತ್ರಜ್ಞಾನದ ಮತಯಂತ್ರಗಳನ್ನು ಅಭಿವೃದ್ಧಿಪಡಿಸಿದ್ದು, ಶುಕ್ರವಾರ ನಗರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಂಟ್ರೋಲ್‌ ಯೂನಿಟ್‌ ಹಾಗೂ ಬ್ಯಾಲೆಟ್‌ ಯೂನಿಟ್‌ಗಳನ್ನು ಪೂರೈಸಲಿದೆ. ಈವರೆಗೆ ದೇಶದಲ್ಲಿ ಮಾರ್ಕ್‌-2 ತಂತ್ರಜ್ಞಾನದ ಇವಿಎಂಗಳನ್ನು ಬಳಸಲಾಗುತ್ತಿದ್ದು, ಮೊದಲ ಬಾರಿಗೆ ಬೆಂಗಳೂರಿನ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಕ್‌-3 ಇವಿಎಂಗಳನ್ನು ಬಳಸಲು ಚುನಾವಣಾ ಆಯೋಗ ಮುಂದಾಗಿದೆ. ಅದರಂತೆ ಒಟ್ಟು 5 ಸಾವಿರ ಇವಿಎಂಗಳು ಆಯೋಗಕ್ಕೆ ರವಾನೆಯಾಗಲಿದ್ದು, ಆ ಪೈಕಿ 3250 ಇವಿಎಂಗಳನ್ನು ಬಳಸಲಾಗುತ್ತದೆ.

ಮಾರ್ಕ್‌-3 ಇವಿಎಂ ವಿಶೇಷತೆ: ಸದ್ಯ ಲಭ್ಯವಿರುವ ಮಾರ್ಕ್‌-2 ಇವಿಎಂನ ಕಂಟ್ರೋಲ್‌ ಯೂನಿಟ್‌ಗಳಿಗೆ ತಲಾ 16 ಅಭ್ಯರ್ಥಿಗಳ ಹೆಸರಿರುವ 4 ಬ್ಯಾಲೆಟ್‌ ಯೂನಿಟ್‌ಗಳನ್ನು ಜೋಡಣೆ ಮಾಡಬಹುದಾಗಿದೆ. ಆದರೆ, ಮಾರ್ಕ್‌- 3 ಕಂಟ್ರೋಲ್‌ ಯೂನಿಟ್‌ಗಳಿಗೆ 14 ಬ್ಯಾಲೆಟ್‌ ಯೂನಿಟ್‌ಗಳನ್ನು ಜೋಡಣೆ ಮಾಡಬಹುದಾಗಿದ್ದು, 384 ಅಭ್ಯರ್ಥಿಗಳ ಹೆಸರುಗಳನ್ನು ಸೇರಿಸಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್‌ ಹೇಳಿದರು.

 

About the author

ಕನ್ನಡ ಟುಡೆ

Leave a Comment