ರಾಜಕೀಯ

ಇನ್ನು ಏಳು ವಾರಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ: ಯಡಿಯೂರಪ್ಪ

ಬೆಂಗಳೂರು: ಲೋಕಸಭೆ ಚುನಾವಣೆ ಯಾವಾಗ ಬೇಕಾದರೂ ಘೋಷಣೆಯಾಗಬಹುದು, ಇಡೀ ಚುನಾವಣೆ ಪ್ರಕ್ರಿಯೆ  ಮುಂದಿನ ಏಳೆಂಟು ವಾರಗಳಲ್ಲಿ  ಪೂರ್ಣಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ  ರಾಜ್ಯದ 28 ಕ್ಷೇತ್ರಗಳ ಪೈಕಿ 22 ಸ್ಥಾನ ಗೆಲ್ಲುವತ್ತ ಕೆಲಸ ಮಾಡಲಿದ್ದೇವೆ, ಈ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಒಂದು ವೇಳೆ ಬಿಜೆಪಿ 300 ಸೀಟುಗಳನ್ನು ಗೆದ್ದರೇ ರಾಜ್ಯ, 22 ಸೀಟು ಗೆಲ್ಲುತ್ತದೆ, ಅದಕ್ಕಾಗಿ ನಾವು ನಮ್ಮೆಲ್ಲಾ ಸಮಯವನ್ನು ಮೀಸಲಿಡುತ್ತೇವೆ, ಕಳೆದ ನಾಲ್ಕೂವರೆ ವರ್ಷದಿಂದ ಪ್ರಧಾನಿ ಮೋದಿ ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ, ಇಂಥಠ ಹಾರ್ಡ್ ವರ್ಕ್ ಮಾಡುವ ಪ್ರಧಾನಿ ನಮಗೆ ಬೇಕು, ಹೀಗಾಗಿ ಮೋದಿ ಅವರಿಗೆ ಬೆಂಬಲಿಸಬೇಕು ಎಂದು ಹೇಳಿದ್ದಾರೆ.
ಮೋದಿ ಅವರ ನಿರಂತರ ಶ್ರಮದಿಂದಾಗಿ ಭಾರತ ಪ್ರಗತಿ ಪರ ದೇಶಗಳ ಸಾಲಿಗೆ ಸೇರಿದೆ, ಅಂತಾರಾಷ್ಟ್ರೀಯ ಸಮುದಾಯದಿಂದ ಪಾಕಿಸ್ತಾನವನ್ನು ಪ್ರತ್ಯೇಕವಾಗಿರಿಸಲು ಹಾಗೂ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಲು ಪಾಕಿಸ್ತಾನದ ಮೇಲೆ ಒತ್ತಡ ಹಾಕಿದ್ದರು ಎಂದು ಯಡಿಯೂರಪ್ಪ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment