ರಾಜ್ಯ ಸುದ್ದಿ

ಇನ್ನು ಮುಂದೆ ನಿಮ್ಮ ಮನೆ ಬಾಗಿಲಲ್ಲಿಯೇ ಸಿಗಲಿದೆ ಇ-ಮುದ್ರಾಂಕ ವ್ಯವಸ್ಥೆ

ಬೆಂಗಳೂರು: ಇನ್ನು ಮುಂದೆ ಇಸ್ಟಾಂಪ್(ಮುದ್ರಾಂಕ) ಗೆ ಸಂಬಂಧಪಟ್ಟ ಅಧಿಕೃತ ಕೇಂದ್ರಕ್ಕೆ ಹೋಗಬೇಕಾಗಿಲ್ಲ. ಯಾರು ಎಲ್ಲಿ ಯಾವಾಗ ಬೇಕಾದರೂ ಪಡೆಯಬಹುದಾಗಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆ ಈ ಸಂಬಂಧ ನೂತನ ವ್ಯವಸ್ಥೆ ಆರಂಭವಾಗಲಿದೆ ಎಂದು ಹೇಳಿದೆ.ಹೊಸ ವ್ಯವಸ್ಥೆಯಡಿ, ಯಾರು ಎಲ್ಲಿ ಬೇಕಾದರೂ ಇ-ಸ್ಟಾಂಪ್ ಗಳನ್ನು ಭರ್ತಿ ಮಾಡಿ ಅದರ ಮುದ್ರಣವನ್ನು ಪಡೆಯಬಹುದು. ನಂತರ ಅದನ್ನು ನೋಟರಿಯಿಂದ ದೃಢೀಕರಣ ಮಾಡಿಕೊಳ್ಳಬೇಕು.ಮುದ್ರಾಂಕ ಆಯುಕ್ತ ಮತ್ತು ದಾಖಲಾತಿ ಕೇಂದ್ರದ ಇನ್ಸ್ ಪೆಕ್ಟರ್ ಜನರಲ್ ಡಾ ಕೆ ವಿ ತ್ರಿಲೋಕ್ ಚಂದ್ರ, ಸ್ಟಾಕ್ ಹೋಲ್ಡಿಂಗ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ಅಧಿಕೃತ ಸುಮಾರು 3,500 ಕೇಂದ್ರಗಳಿವೆ. ಮಾರಾಟ ಒಪ್ಪಂದ, ಬಾಡಿಗೆ ಒಪ್ಪಂದ, ಕಚೇರಿಗಳಲ್ಲಿ ಮಾಲೀಕರು ಮತ್ತು ನೌಕರರ ಒಪ್ಪಂದ ಪತ್ರಗಳು ಇತ್ಯಾದಿಗಳಿಗೆ ನೋಂದಣಿ ಮತ್ತು ಮುದ್ರಾಂಕಗಳಿಗೆ ಈ ಕೇಂದ್ರಗಳಿಂದ ಮುದ್ರಾಂಕ ಪತ್ರಗಳನ್ನು ಪಡೆದುಕೊಂಡು ಭರ್ತಿ ಮಾಡಿ ನಂತರ ನೋಟರಿಯಿಂದ ಪ್ರಮಾಣ ಮಾಡಿಸಿಕೊಳ್ಳಬೇಕು. ಹೊಸ ವ್ಯವಸ್ಥೆ ಜಾರಿಗೆ ಬಂದ ಮೇಲೆ  ಇ-ಸ್ಟಾಂಪ್ ಕಾಗದವನ್ನು ಎಲ್ಲಿ ಯಾವಾಗ ಬೇಕಾದರೂ ಭರ್ತಿ ಮಾಡಬಹುದು ಎಂದರು.ಒಪ್ಪಂದ ಒಂದು ಬಾರಿ ಕಾಗದದಲ್ಲಿ ಭರ್ತಿ ಮಾಡಿದ ನಂತರ ಇ-ಮುದ್ರಾಂಕವನ್ನು ಕೇವಲ ಒಂದು ಬಾರಿ ಮಾತ್ರ ಮುದ್ರಣ ಮಾಡಿಕೊಳ್ಳಬಹುದು. ನಕಲಿ ಮಾಡುವುದು ಅಥವಾ ಮೋಸ ಮಾಡುವುದನ್ನು ತಪ್ಪಿಸಲು ಈ ಕ್ರಮವನ್ನು ಅನುಸರಿಸಲಾಗುತ್ತದೆ ಎಂದು ತ್ರಿಲೋಕ್ ಚಂದ್ರ ಹೇಳಿದರು.ಈ ಪ್ರಕ್ರಿಯೆಗೆ ನಗದನ್ನು ಸಹ ನೆಟ್ ಬ್ಯಾಂಕಿಂಗ್ ಮೂಲಕ ಮಾಡಿಕೊಳ್ಳಬಹುದಾಗಿದೆ. ಮುದ್ರಾಂಕ ಕಾಗದದಲ್ಲಿ ಭರ್ತಿ ಮಾಡಿದ ನಂತರ ಅದರ ಶುಲ್ಕವನ್ನು ತೋರಿಸುತ್ತದೆ. ಆನ್ ಲೈನ್ ನಲ್ಲಿಯೇ ಹಣ ಪಾವತಿಸಬಹುದು. ಸೇವಾ ಶುಲ್ಕ ಜಾರಿಗೆ ತರುವ ಪ್ರಸ್ತಾಪವಿದೆ, ಆದರೆ ನಾವು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದರು.ಕರ್ನಾಟಕದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಹೆಚ್ಚು ಆದಾಯ ಬರುತ್ತಿರುವ ಮೂಲಗಳಲ್ಲಿ ಮೂರನೇ ಸ್ಥಾನದಲ್ಲಿದೆ. 2008ರಿಂದ ಇ-ಮುದ್ರಾಂಕವನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದ್ದು ಛಾಪಾ ಕಾಗದ ಹಗರಣವನ್ನು ತಪ್ಪಿಸಲು ಈ ಕ್ರಮ ಅಳವಡಿಸಲಾಯಿತು. ನಮ್ಮ ರಾಜ್ಯದಲ್ಲಿ ಪ್ರತಿದಿನ ಸುಮಾರು 80 ಸಾವಿರ ಮಂದಿ ಇ-ಮುದ್ರಾಂಕವನ್ನು ಖರೀದಿಸುತ್ತಾರೆ. ಅವುಗಳಲ್ಲಿ ಶೇಕಡಾ 50ರಷ್ಟು ವಿವಿಧ ಒಪ್ಪಂದ ಮತ್ತು ಅಫಿಡವಿಟ್ಟಿಗೆ ಸಂಬಂಧಪಟ್ಟದ್ದಾಗಿದೆ.

About the author

ಕನ್ನಡ ಟುಡೆ

Leave a Comment