ದೇಶ ವಿದೇಶ

ಇಬ್ಬರು ಹಿಂದೂ ಸೋದರಿಯರ ಅಪಹರಣ: ಪಾಕ್‌ ಸಚಿವರಿಗೆ ಸುಷ್ಮಾ ಸ್ವರಾಜ್ ತರಾಟೆ

ಹೊಸದಿಲ್ಲಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಆಚರಣೆ ವೇಳೆ ಇಬ್ಬರು ಹಿಂದೂ ಸಹೋದರಿಯರನ್ನು ಅಪಹರಿಸಿ, ಬಲವಂತವಾಗಿ ಮತಾಂತರಿಸಿ ಮುಸ್ಲಿಂ ವ್ಯಕ್ತಿಗಳ ಜತೆ ಮದುವೆ ಮಾಡಿಸಿದ ಪ್ರಕರಣವನ್ನು ವಿದೇಶಾಂಗ ಸಚಿವೆ  ಸುಷ್ಮಾ ಸ್ವರಾಜ್ ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಕುರಿತು ಸುಷ್ಮಾ ಸ್ವರಾಜ್ ಹಾಗೂ ಪಾಕ್ ವಾರ್ತಾ ಸಚಿವ ಫವಾದ್ ಚೌಧರಿ ನಡುವೆ ತೀವ್ರ ವಾಗ್ವಾದಗಳು ನಡೆದಿವೆ.

ಇಬ್ಬರು ಸಚಿವರ ನಡುವೆ ತೀಕ್ಷ್ಣ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‌, ಹಿಂದೂ ಬಾಲಕಿಯರ ತ್ವರಿತ ಪತ್ತೆ ಹಾಗೂ ರಕ್ಷಣೆಗೆ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯ ಸರಕಾರಗಳಿಗೆ ಆದೇಶ ನೀಡಿದ್ದಾರೆ. ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆಯೂ ತಾಕೀತು ಮಾಡಿದ್ದಾರೆ.

ಭಾರತ ಸರಕಾರ ಪಾಕ್ ವಿದೇಶಾಂಗ ಸಚಿವಾಲಯದ ಕಚೇರಿಗೆ ಅಧಿಕೃತ ಪತ್ರ ಕಳುಹಿಸಿದ್ದು, ‘ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ನಾಗರಿಕರ ರಕ್ಷಣೆ, ಭದ್ರತೆ ಹಾಗೂ ಹಿತ ಕಾಪಾಡಲು’ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಧರ್ಕಿ ಪಟ್ಟಣದಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿದ್ದ ರವೀನಾ (13) ಮತ್ತು ರೀನಾ (15) ಎಂಬ ಹಿಂದೂ ಸೋದರಿಯರನ್ನು ದುಷ್ಕರ್ಮಿಗಳು ಅಪಹರಿಸಿ ಮತಾಂತರಗೊಳಿಸಿ ಬಲವಂತವಾಗಿ ಮುಸ್ಲಿಂ ವ್ಯಕ್ತಿಗಳ ಜತೆ ಮದುವೆ ಮಾಡಿಸಿದ್ದರು ಎಂದು ಮಾರ್ಚ್ 23ರಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿತ್ತು.

About the author

ಕನ್ನಡ ಟುಡೆ

Leave a Comment