ರಾಷ್ಟ್ರ ಸುದ್ದಿ

ಇಮ್ರಾನ್​ ಖಾನ್​ ಬಣ್ಣಿಸಿದ ಸಿಧುಗೆ ಪ್ರಕಾಶ್​ ಜಾವಡೇಕರ್​ ತಿರುಗೇಟು

ಜೈಪುರ: ಕರ್ತಾರ್​ಪುರ ಕಾರಿಡಾರ್​ ಯೋಜನೆ ಶಂಕುಸ್ಥಾಪನೆಯಲ್ಲಿ ಪಾಲ್ಗೊಂಡು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಹೊಗಳಿದ್ದ ಪಂಜಾಬ್​ ಸಚಿವ ನವಜೋತ್​ ಸಿಂಗ್​ ಸಿಧು ನಡೆಯನ್ನು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ತೀವ್ರವಾಗಿ ಟೀಕಿಸಿದ್ದು, ಇದು ನೀವು ಪಾಲ್ಗೊಳ್ಳುವ ‘ಲಾಫರ್​ ಚಾಲೆಂಜ್’​ ಕಾರ್ಯಕ್ರಮವಲ್ಲ ಎಂದು ಅರಿಯಬೇಕಿದೆ ಎಂದಿದ್ದಾರೆ.

ಪಾಕಿಸ್ತಾನ ಗಡಿಯನ್ನೂ ಮೀರಿ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದೆ. ಅಂಥದ್ದರಲ್ಲಿ ಸಿಧು ಅವರು ಪಾಕಿಸ್ತಾನಕ್ಕೆ ತೆರಳಿ ದೇಶದ ಆಂತರಿಕ ಖಾಸಗಿ ವಿಷಯಗಳನ್ನೂ ಮಾತನಾಡುತ್ತಾರೆ. ರಾಜತಾಂತ್ರಿಕ ಸಂಬಂಧದ ನಿಯಮಗಳನ್ನು ಮುರಿದಿರುವ ಸಿಧು ಅತಿದೊಡ್ಡ ಪಾಪ ಎಸಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕುತ್ತಿರುವುದೇ ಪಾಕಿಸ್ತಾನ. ಅಂಥದ್ದರಲ್ಲಿ ಅದರ ಪ್ರಧಾನಿಯನ್ನೇ ಸಿಧು ಹೊಗಳುತ್ತಿದ್ದಾರೆ ಎಂದರೆ ತುಂಬ ಆಶ್ಚರ್ಯವಾಗುತ್ತಿದೆ. ಇದು ಅವರು ಪಾಲ್ಗೊಳ್ಳುವ ಹಿಂದಿ ಲಾಫರ್​ ಚಾಲೆಂಜ್​ ಕಾರ್ಯಕ್ರಮವಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್​ ಕೂಡ ಸಿಧು ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅದು ದ್ವಿಮುಖ ನೀತಿ ಅನುಸರಿಸುತ್ತಿದೆ. ಈ ಮೊದಲು ಕಾಂಗ್ರೆಸ್​ ಮುಖಂಡ ಮಣಿ ಶಂಕರ್​ ಅಯ್ಯರ್​ ಅವರು ಕೂಡ ಪಾಕಿಸ್ತಾನಕ್ಕೆ ಹೋಗಿದ್ದರು ಮತ್ತು ಮೋದಿಯವರನ್ನು ಅಧಿಕಾರದಿಂದ ಇಳಿಸುವ ಬಗ್ಗೆ ಮಾತನಾಡಿದ್ದರು. ಈಗ ಸಿಧು ಕೂಡ ಅಯ್ಯರ್ ಹಾದಿಯನ್ನೇ ತುಳಿದಿದ್ದಾರೆ ಎಂದು ಆರೋಪಿಸಿದರು.

ಸಿಧು ಬಣ್ಣನೆ ಏನು? ಕರ್ತಾರ್​ಪುರ ಸಾಹಿಬ್ ಕಾರಿಡಾರ್ ಕುರಿತು ಯಾವಾಗಲಾದರೂ ಇತಿಹಾಸವನ್ನು ಬರೆದರೆ, ಅದರ ಮೊದಲ ಪುಟದಲ್ಲೇ ಪಾಕ್​ ಪ್ರಧಾನಿ ಇಮ್ರಾನ್ ಖಾನ್​ ಹೆಸರಿರುತ್ತದೆ ಎಂದು ಸಿಧು ಬಣ್ಣಿಸಿದ್ದರು.

About the author

ಕನ್ನಡ ಟುಡೆ

Leave a Comment