ರಾಷ್ಟ್ರ

ಇರಾಕ್’ನಲ್ಲಿ ಭಾರತೀಯರ ಹತ್ಯೆ ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಸುಷ್ಮಾ ಸ್ವರಾಜ್ ತೀವ್ರ ವಾಗ್ದಾಳಿ

ನವದೆಹಲಿ: ಇರಾಕ್’ನ ಮೊಸುಲ್ ನಲ್ಲಿ 39 ಭಾರತೀಯರ ಹತ್ಯೆ ಮಾಡಿರುವ ಪ್ರಕರಣಯಿಂದಾಗಿ ಲೋಕಸಭೆಯಲ್ಲಿ ತೀವ್ರ ಗದ್ದಲವನ್ನು ಸೃಷ್ಟಿಸಿದ್ದ ಕಾಂಗ್ರೆಸ್ ವಿರುದ್ಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತೀವ್ರ ಕಿಡಿ ಕಾರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ರಾಜ್ಯಸಭೆಯಲ್ಲಿ ಪ್ರತೀಯೊಬ್ಬರೂ ನನ್ನ ಮಾತುಕತಗಳನ್ನು ತಾಳ್ಮೆ ಹಾಗೂ ಶಾಂತಿಯುತದಿಂದ ಕೇಳುತ್ತಿದ್ದರು ಹಾಗೂ ಪ್ರತೀಯೊಬ್ಬರೂ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದರು. ಲೋಕಸಭೆಯಲ್ಲಿಯೂ ಇದೇ ರೀತಿಯಾಗುತ್ತದೆ ಎಂದು ತಿಳಿದಿದ್ದೆ.

ಆದರೆ ಕಳೆದ ಹಲವು ದಿನಗಳಿಂದ ಗದ್ದಲವುಂಟು ಮಾಡಿದ್ದರು ಮತ್ತು ಕಾಂಗ್ರೆಸ್ ಪ್ರತಿಭಟನೆಗಳನ್ನು ಮುಂದುವರೆಸಿತ್ತು. ಇದು ನಿಜಕ್ಕೂ ದುರಾದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅತ್ಯಂತ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಲ್ಲಾ ರೀತಿಯ ನಿಯಂತ್ರಣಗಳನ್ನು ಮೀರಿ ಕಾಂಗ್ರೆಸ್ ಇಂದು ಲೋಕಸಭೆಯಲ್ಲಿ ವರ್ತನೆ ತೋರಿದೆ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment