ರಾಷ್ಟ್ರ

ಇರಾಕ್ ನಲ್ಲಿ   ಭಾರತೀಯರು ಸಾವನ್ನಪಿದ ವಿಷಯ ತಿಳಿದು ಮನನೊಂದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಇರಾಕ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ನಿಂದ ಕೊಲ್ಲಲ್ಪಟ್ಟ 39 ಭಾರತೀಯರ ಕುಟುಂಬಗಳಿಗೆ ತೀವ್ರ  ದುಖಃದ ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ.  ಇರಾಕ್ನಲ್ಲಿ 2014 ರಿಂದ ಸೆರೆಯಲ್ಲಿದ್ದ 39 ಭಾರತೀಯರು ಈಗ ಮೃತಪಟ್ಟಿದ್ದಾರೆಂದು ನಾನು ಆಘಾತಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ.

ಇರಾಕ್ ನಲ್ಲಿ ಸಾವನ್ನಪಿದ ಕುಟುಂಬಗಳಿಗೆ ನನ್ನ ಆಳವಾದ ಸಾಂತ್ವನ ಹೇಳುತ್ತೆನೆ. ಅವರ ಪ್ರೀತಿಪಾತ್ರರಿಗೆ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಇಂದು ನಿಮ್ಮೆಲ್ಲರೊಂದಿಗಿವೆ ಎಂದು ಅವರ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.

2014 ರಲ್ಲಿ ಕಾಣೆಯಾದ 39 ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.ರಾಜ್ಯಸಭೆಯಲ್ಲಿ ಮಾತನಾಡಿದ ಸ್ವರಾಜ್ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ರಾಜ್ಯ ಎಲ್ಲಾ ಭಾರತೀಯರನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ.

 

 

About the author

ಕನ್ನಡ ಟುಡೆ

Leave a Comment