ರಾಷ್ಟ್ರ ಸುದ್ದಿ

ಇವತ್ತು ಸಜ್ಜನ್ ಕುಮಾರ್ , ನಾಳೆ ಕಮಲ್ ನಾಥ್ : 1984 ಸಿಖ್ ವಿರೋಧಿ ದಂಗೆ ದೋಷಿ ಕುರಿತು ಶಿರೋಮಣಿ ಅಕಾಲಿ ದಳ

ಪಂಜಾಬ್ :  1984 ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ದೋಷಿ  ಎಂದು ದೆಹಲಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ.
ಶಿರೋಮಣಿ ಅಕಾಲಿ ದಳದ ಕೋರಿಕೆ  ಮೇರೆಗೆ 2015ರಲ್ಲಿ  ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ನೇಮಿಸಿದ್ದ  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ನುಡಿದಿದ್ದಾರೆ. ನ್ಯಾಯದ ಚಕ್ರ ಅಂತಿಮವಾಗಿ ಹೊರಟಿದ್ದು, ಇಂದು ಸಜ್ಜನ್ ಕುಮಾರ್, ನಾಳೆ ಜಗದೀಶ್ ಟೈಟ್ಲರ್ , ನಂತರ ಕಮಲ್ ನಾಥ್ , ಗಾಂಧಿ ಕುಟುಂಬವನ್ನು  ಸುತ್ತಿಕೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.1984ರಲ್ಲಿ ಸಂಭವಿಸಿದ್ದ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ  ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರನ್ನು ದೋಷಿ ಎಂದು  ತೀರ್ಪು ನೀಡಿರುವ ದೆಹಲಿ ಹೈಕೋರ್ಟ್ , ಜೀವವಾಧಿ ಶಿಕ್ಷೆ ವಿಧಿಸಿದೆ.ಈ  ದಂಗೆ ಸಂದರ್ಭದಲ್ಲಿ   ಕಾಂಗ್ರೆಸ್ ಮುಖಂಡರು  ಪೊಲೀಸರೊಂದಿಗೆ ಶಿಖ್ ಸಮುದಾಯದ ಮನೆಗಳಿಗೆ ನುಗ್ಗಿ ಅವರ ಕುಟುಂಬ ಸದಸ್ಯರ ಎದುರೇ  ಸಾವಿರಾರು ಅಮಾಯಕರನ್ನು ಬರ್ಬರವಾಗಿ ಹತ್ಯೆಗೈದಿದ್ದರು. ಆ  ಘಟನೆಯನ್ನು ಈಗಲೂ ನೆನಪಿಸಿಕೊಂಡರೆ ಭಯವಾಗುತ್ತದೆ ಎಂದು  ಹರ್ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment