ರಾಷ್ಟ್ರ ಸುದ್ದಿ

ಇಸಿಸ್ ಅಡಗುತಾಣಗಳ ಮೇಲಿನ ದಾಳಿ ದೊಡ್ಡ ಯಶಸ್ಸನ್ನು ತಂದಿದೆ: ಎನ್ಐಎ ಕೊಂಡಾಡಿದ ರಾಜನಾಥ್ ಸಿಂಗ್

ನವದೆಹಲಿ: ಭಾರತದ ಮೇಲೆ ಸದಾ ಕಾಲ ತನ್ನ ಕೆಂಗಣ್ಣು ಬೀರುತ್ತಲೇ ಇರುವ ಪಾಕಿಸ್ತಾನ ಮೂಲಕ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆಯ ಅಡಗು ತಾಣಗಳ ಮೇಲೆ ಭಾರೀ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಕೊಂಡಾಡಿದ್ದಾರೆ.
ರಾಜಧಾನಿ ದೆಹಲಿ ಹಾಗೂ ಉತ್ತರಪ್ರದೇಶದಲ್ಲಿದ್ದ ಇಸಿಸ್ ಅಡಗುತಾಣಗಳ ಮೇಲೆ ಎನ್ಐಎ ದಾಳಿ ನಡೆಸಿದ್ದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಇಸಿಸ್ ಅಡಗುತಾಣಗಳ ಮೇಲಿನ ದಾಳಿ ದೊಡ್ಡ ಯಶಸ್ಸಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ. ಇದರಂತೆ ವಿತ್ತ ಸಚಿವ ಅರುಣ್ ಜೇಟ್ಲಿಯವರೂ ಕೂಡ ಎನ್ಐಎ ಅಧಿಕಾರಿಗಳನ್ನು ಕೊಂಡಾಡಿದ್ದಾರೆ. ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಅತ್ಯಂತ ಭಯಾನಕ ಉಗ್ರ ಸಂಘಟನೆಯ ಅಡಗುತಾಣಗಳ ಮೇಲೆ ಎನ್ಐಎ ದಾಳಿ ನಡೆಸಿದ್ದು, ಎನ್ಐಎ ಕಾರ್ಯಾಚರಣೆ ಪ್ರಶಂಸನೀಯವಾದದ್ದು ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮಾತನಾಡಿ, ಉಗ್ರರ ಅಡಗುತಾಣಗಳ ಮೇಲಿನ ದಾಳಿ ದೊಡ್ಡ ಸಾಧನೆ, ಯಶಸ್ಸನ್ನು ತಂದಿದೆ. ಎನ್ಐಎ ಅತ್ಯುತ್ತಮ ಕಾರ್ಯ ಮಾಡಿದೆ. ಎನ್ಐಎ ವೃತ್ತಿಪರ ಸಂಘಟನೆ, ರಚನೆಗೊಂಡಾಗಿನಿಂದಲೂ ಎನ್ಐಎ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಲೇ ಇದೆ. ಘಟನೆ ಸಂಭವಿಸುವುದಕ್ಕೂ ಮುನ್ನ ಅದರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment