ರಾಷ್ಟ್ರ ಸುದ್ದಿ

ಇಸೀಸ್ ನಿಂದ ಪ್ರೇರಣೆ ಪಡೆದ ಪ್ರಕರಣ: ಉತ್ತರ ಪ್ರದೇಶ, ಪಂಜಾಬ್ ನಲ್ಲಿ ಎನ್ಐಎ ಶೋಧಕಾರ್ಯ

ನವದೆಹಲಿ: ಇಸೀಸ್ ಉಗ್ರ ಸಂಘಟನೆಯಿಂದ ಸ್ಥಳೀಯ ಗುಂಪೊಂದು ಪ್ರೇರಣೆ ಪಡೆದ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎನ್ಐಎ, ತನಿಖೆಯ ಭಾಗವಾಗಿ ಉತ್ತರ ಪ್ರದೇಶದ ಪಶ್ಚಿಮ ವಲಯ, ಪಂಜಾಬ್ ಗಳಲ್ಲಿ ಶೋಧಕಾರ್ಯ ನಡೆಸಿದೆ.
ದೆಹಲಿ ಹಾಗೂ ಉತ್ತರ ಭಾರತದ ಪ್ರಮುಖ ಪ್ರದೇಶಗಳಲ್ಲಿರುವ ರಾಜಕಾರಣಿಗಳು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಲು ಈ ಇಸೀಸ್ ನಿಂದ ಪ್ರೇರಣೆ ಪಡೆದ ಗುಂಪು ಯೋಜನೆ ರೂಪಿಸುತ್ತಿತ್ತು. ಈ ಸಂಬಂಧ ತನಿಖಾ ಸಂಸ್ಥೆ 12 ಜನರನ್ನು 2018 ರ ಡಿ.26 ರಂದು ಬಂಧಿಸಿತ್ತು. ಈ ಬೆನ್ನಲ್ಲೇ ಜ.12 ರಂದು ಮೊಹಮ್ಮದ್ ಅಬ್ಸರ್ (24)  ಎಂಬ  ಮತ್ತೋರ್ವನನ್ನು ಬಂಧಿಸಲಾಗಿತ್ತು. ಈ ಹಿಂದಿನ ಶೋಧಕಾರ್ಯಾಚರಣೆ ವೇಳೆ ರಾಕೆಟ್ 112 ಲಾಂಚರ್ ಗಳನ್ನು 25 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.

About the author

ಕನ್ನಡ ಟುಡೆ

Leave a Comment