ದೇಶ ವಿದೇಶ

ಇಸ್ರೇಲ್ ಚುನಾವಣೆ: ಭಾರತದ ಸರ್ವಶ್ರೇಷ್ಠ ಆಪ್ತ ನಿಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಶುಭಾಶಯ ಕೋರಿರುವ ಪ್ರಧಾನಿ ಮೋದಿ, ಭಾರತದ ಶ್ರೇಷ್ಠ ಆಪ್ತ ಮಿತ್ರನಿಗೆ ಗೆಲುವಿನ ಶುಭಾಶಯ. ನೆತನ್ಯಾಹು ನೇತೃತ್ವದಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತೊಂದು ಹಂತಕ್ಕೆ ಮೇಲೇರಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂತೆೇಯ ನೆತನ್ಯಾಹು ಅವರೊಂದಿಗೆ ಕೆಲಸ ಮಾಡಲು ನಾನು ಕೂಡ ಅತ್ಯಂತ ಉತ್ಸುಕನಾಗಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಇನ್ನು ಭಾರತದ ಅತ್ಯಂತ ಪರಮಾಪ್ತ ರಾಷ್ಟ್ರಗಳಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವ ಇಸ್ರೇಲ್ ಈ ಹಿಂದೆ ಕಾರ್ಗಿಲ್ ಸೇರಿದಂತೆ ಭಾರತದ ಸಂಕಷ್ಟದಲ್ಲಿ ಜೊತೆಯಾಗಿತ್ತು. ಅಂತೆಯೇ ಕಳೆದ 2017ರಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಭಾರತ ಪ್ರವಾಸ ಕೈಗೊಂಡಿದ್ದಾಗ ಭಾರತದ ಬಗ್ಗೆ ತಮಗಿರುವ ಪ್ರೀತಿಯನ್ನು ನೆತನ್ಯಾಹು ತೋರಿಸಿದ್ದ ರೀತಿ ಇಡೀ ಜಗತ್ತಿನ ಗಮನ ಸೆಳೆದಿತ್ತು. ಅಂದು ಇಸ್ರೇಲ್ ನಿಂದ ದೆಹಲಿಗೆ ಆಗಮಿಸಿದ್ದ ನೆತನ್ಯಾಹು ತಮ್ಮ ವಿಮಾನದ ಒಂದು ಬದಿಯಲ್ಲಿ ಇಸ್ರೇಲ್ ಧ್ವಜವನ್ನೂ ಮತ್ತೊಂದು ಬದಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾಕಿದ್ದರು. ಅಂದು ಶಿಷ್ಠಾಚಾರ ಮರೆತು ಪ್ರಧಾನಿ ಮೋದಿ ಅವರೇ ಖುದ್ಧಾಗಿ ನೆತನ್ಯಾಹು ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು.

About the author

ಕನ್ನಡ ಟುಡೆ

Leave a Comment