ಅ೦ತರಾಷ್ಟ್ರೀಯ

ಇಸ್ರೇಲ್ ಪ್ರೀತಿಗೆ ನಾನು ಅಭಾರಿ, ಯಾವುದೇ ಕಾರಣಕ್ಕೂ ನಂಬಿಕೆ ಹುಸಿಗೊಳಿಸುವುದಿಲ್ಲ: ಪ್ರಧಾನಿ ನೆತನ್ಯಾಹು

ಟೆಲ್ ಅವೀವ್: ಇಸ್ರೇಲ್ ಚುನಾವಣೆ ಗೆಲುವು ಸಾಧಿಸಿ ದಾಖಲೆಯ ಸತತ 5ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಜನರ ಪ್ರೀತಿಗೆ ತಾವು ಅಭಾರಿಯಾಗಿದ್ದು, ಯಾವುದೇ ಕಾರಣಕ್ಕೂ ಅವರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಅತ್ತ ಚುನಾವಣಾ ಫಲಿತಾಂಶದಲ್ಲಿ ತಮ್ಮ ಪಕ್ಷ ಜಯಭೇರಿ ಬಾರಿಸುತ್ತಿದ್ದಂತೆಯೇ ಅತ್ತ ರಾಜಧಾನಿ ಟೆಲ್ ಅವೀವ್ ನಲ್ಲಿ ಲಿಕುಡ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು, ಅಭಿಮಾನಿಗಳೊಂದಿಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಂಭ್ರಮಾಚರಣೆಯಲ್ಲಿ ತೊಡಗಿದರು. ಪಕ್ಷದ ಪ್ರಮುಖ ನಾಯಕರು ಹಾಗೂ ಮಿತ್ರ ಕೂಟದ ನಾಯಕರು ನೆತನ್ಯಾಹು ಅವರನ್ನು ಅಭಿನಂಧಿಸಿದರು. ಅಂತೆಯೇ ಕಾರ್ಯಕರ್ತರು ನೆತನ್ಯಾಹು ಅವರು ಪ್ರೀತಿಯಿಂದ ಬಿಬಿ ಎಂದು ಕೂಗುತ್ತಾ ಅವರ ಪರ ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನೆತನ್ಯಾಹು ಅವರು, ಇಂದಿನ ರಾತ್ರಿ ಸರ್ವಶ್ರೇಷ್ಠ ವಿಜಯದ ರಾತ್ರಿಯಾಗಿರುತ್ತದೆ. ಲಿಕುಡ್ ಪಕ್ಷ ಅಭೂತ ಪೂರ್ವ ಜಯ ಕಂಡಿದೆ. ನಮ್ಮ ಮೈತ್ರಿ ಪಕ್ಷಗಳಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಅಂತೆಯೇ  ಇಸ್ರೇಲ್ ಜನರ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದ ನೆತನ್ಯಾಹು ಅವರು, ಈ ಜಯದ ನನ್ನ ಮನಸ್ಸಿಗೆ ತುಂಬಾ ಹತ್ತಿರವಾದದ್ದು. ಸತತ 5ನೇ ಬಾರಿಗೆ ಇಸ್ರೇಲ್ ಜನತೆ ನನ್ನ ಮೇಲೆ ನಂಬಿಕೆ ಇರಿಸಿದ್ದಾರೆ. ಯಾವುದೇ ಕಾರಣಕ್ಕೂ ಅವರ ನಂಬಿಕೆಯನ್ನು ನಾನು ಹುಸಿಗೊಳಿಸುವುದಿಲ್ಲ.

About the author

ಕನ್ನಡ ಟುಡೆ

Leave a Comment