ತಂತ್ರಜ್ಞಾನ

ಇಸ್ರೊ ನಿರ್ಮಿತ ಜಿಸ್ಯಾಟ್–6ಎ ಸಂವಹನ ಉಪಗ್ರಹ ಉಡಾವಣೆ ಯಶಸ್ವಿ.

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಭಾರತೀಯ ಸಂವಹನ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬಲಿರುವ ಜಿಸ್ಯಾಟ್‌-6ಎ ಅನ್ನು ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇಂದು ಸಂಜೆ 4.56ಕ್ಕೆ ಆಂಧ್ರ ಪ್ರದೇಶದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ(ಜಿಎಸ್‌ಎಲ್‌ವಿ-ಎಫ್‌08)ದ ಮೂಲಕ ಜಿಸ್ಯಾಟ್–6ಎ ಉಪಗ್ರಹವನ್ನು ಉಡಾವಣೆ ಮಾಡಲಾಯಿತು.

ಒಟ್ಟು 17 ನಿಮಿಷಗಳ ಕಾಲ ಮೂರು ಹಂತಗಳಲ್ಲಿ ನಡೆದ ರಾಕೆಟ್ ಉಡಾವಣೆ ಪ್ರಕ್ರಿಯೆ ಕೊನೆಗೆ ಜಿಸ್ಯಾಟ್-6ಎ ಉಪಗ್ರಹವನ್ನು ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಇಸ್ರೊ ನಿರ್ಮಿತ ಎಸ್‌–ಬ್ಯಾಂಡ್‌ ಸಂಪರ್ಕಕ್ಕಾಗಿ ಬಳಕೆಯಾಗುವ ಈ ಉಪಗ್ರಹದ ಕಾರ್ಯಾವಧಿ 10 ವರ್ಷ ಎನ್ನಲಾಗಿದೆ.

ಈ ವರ್ಷ ಇಸ್ರೊ ಉಡಾಯಿಸುತ್ತಿರುವ 2ನೇ ಉಪಗ್ರಹ ಇದಾಗಿದ್ದು, ಎಸ್‌- ಬ್ಯಾಂಡ್‌ ಮಾದರಿಯ ಅತ್ಯಂತ ಶಕ್ತಿಶಾಲಿ ಸಂವಹನ ಉಪಗ್ರಹ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಉಪಗ್ರಹ ಆಧಾರಿತ ಮೊಬೈಲ್‌ ಸಂಪರ್ಕ ಅಪ್ಲಿಕೇಷನ್‌ಗಳ ಸಮರ್ಥ ಬಳಕೆ ಸೇರಿ ಅನೇಕ ನೂತನ ತಂತ್ರಜ್ಞಾನಗಳ ಅಭಿವೃದ್ಧಿಗೂ ಈ ಉಪಗ್ರಹ ಸಹಕಾರಿಯಾಗಲಿದೆ .

About the author

ಕನ್ನಡ ಟುಡೆ

Leave a Comment