ಅ೦ತರಾಷ್ಟ್ರೀಯ

ಇಸ್ಲಾಮಿಕ್ ರಾಷ್ಟ್ರಗಳ ಸಮಾವೇಶದಲ್ಲಿ ಗೌರವ ಅತಿಥಿ ಸುಷ್ಮಾ ಸ್ವರಾಜ್

ಅಬುಧಾಬಿ: ವಿದೇಶಾಂಗ ಸಚಿವೆ  ಸುಷ್ಮಾ ಸ್ವರಾಜ್ ಅವರು ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ವಿದೇಶಾಂಗ ಸಚಿವರ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಭಯೋತ್ಪಾದನೆ ಮತ್ತು ಉಗ್ರವಾದ ಎರಡೂ ಬೇರೆ ಬೇರೆ ಹೆಸರುಗಳಷ್ಟೆ. ಅವೆರಡನ್ನೂ ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಪ್ರತಿ ಘಟನೆಯಲ್ಲೂ ಧರ್ಮದ ವಿಕೃತಗೊಳಿಸಿ, ತಪ್ಪು ಹಾದಿಗೆಳೆದ ಯುವಕರನ್ನು ವಿಧ್ವಂಸಕ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.

ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ವಿದೇಶಾಂಗ ಶೃಂಗಸಭೆಯಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಭಗವದ್ಗೀತೆ ಹಾಗೂ ಕುರಾನ್‌ನ ಸಾಲುಗಳನ್ನು ಉದ್ಧರಿಸಿ ಮಾನವೀಯತೆಯ ಸಾರವನ್ನು ಸಾರಿದರು. ಸುಷ್ಮಾ ಸ್ವರಾಜ್ ಅವರಿಗೆ ‘ಗೌರವ ಆತಿಥ್ಯ’ ನ ನೀಡುತ್ತಿರುವ ಹಿನ್ನೆಲೆಯಲ್ಲಿ ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆ( ಓಐಸಿ)ಯ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಕ್ ವಿದೇಶಂಗ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದಾರೆ. ಇಂದು ಬೆಳಗ್ಗೆ ಓಐಸಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಬುಧಾಬಿಗೆ ಬಂದಿಳಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಯುಎಇ ದೊರೆ ಶೇಖ್‌ ಅಬ್ದುಲ್ಲಾ ಬಿನ್ ಜಾಯೇದ್ ಅಲ್ ನಹ್ಯಾನ್ ಹಾಗೂ ವಿದೇಶಾಂಗ ಸಚಿವರು ಸ್ವಾಗತಿಸಿದರು.

 

 

About the author

ಕನ್ನಡ ಟುಡೆ

Leave a Comment