ರಾಜ್ಯ ಸುದ್ದಿ

ಈರುಳ್ಳಿ ಬೆಲೆ ಕುಸಿತ: ವೈರಲ್ ಆಯ್ತು ಪ್ರಧಾನಿಗೆ ಬಾಗಲಕೋಟೆಯ ರೈತ ಬರೆದ ಟ್ವೀಟ್

ನವದೆಹಲಿ: ಈರುಳ್ಳಿ ಬೆಲೆ ದಿಢೀರ್ ಕುಸಿತದಿಂದ ಸಂಕಷ್ಟಕ್ಕೀಡಾಗಿರುವ ರೈತರ ಧನಿಯಾಗಿ ಬಾಗಲಕೋಟೆಯ ರೈತ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಈರುಳ್ಳಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಈ  ಬಗ್ಗೆ ಗಮನ ಹರಿಸುವಂತೆ ಬಾಗಲಕೋಟೆಯ ಬೆನಕಕಟ್ಟಿಯ ರೈತ  ಪ್ರಶಾಂತ್  ಎಂಬವರುಪ್ರಧಾನಿ ನರೇಂದ್ರ ಮೋದಿಗೆ  ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಪ್ರಶಾಂತ್, ಈರುಳ್ಳಿ ಬೆಲೆ ಕುಸಿತ ರೈತರನ್ನು ಸಾಲದ ಸುಳಿಗೆ ಸಿಲುಕಿಸಿದೆ. ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದು, ಕೂಡಲೇ ಬೆಲೆ ಕುಸಿತ ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಈರುಳ್ಳಿ ಬಿತ್ತನೆ , ಬೆಳೆ ಬೆಳೆಯಲು ಖರ್ಚಾದ ಹಣ , ನಷ್ಟದ ಬಗ್ಗೆ ಪ್ರಶಾಂತ್ ಮಾಹಿತಿ ನೀಡಿದ್ದು, ನಾವು ಕನ್ನಡಿಗರು ನಮ್ಮ ಸಮಸ್ಯೆಗೆ ಗಮನ ಹರಿಸಿ ಎಂದು ಪ್ರಶಾಂತ್ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ. ಪ್ರಶಾಂತ್ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

About the author

ಕನ್ನಡ ಟುಡೆ

Leave a Comment