ಸಿನಿ ಸಮಾಚಾರ

ಈ ವಾರ ತೆರೆಗೆ ಬರಲಿರುವ ಜಾನಿ ಜಾನಿ ಎಸ್ ಪಪ್ಪಾ

‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಸಿನಿಮಾದ ನಂತರ ಮತ್ತೆ ದುನಿಯಾ ವಿಜಯ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಒಂದಾಗಿದ್ದರು. ಹಳೆ ಸಿನಿಮಾ ಫ್ಲೇವರ್ ನಲ್ಲಿಯೇ ಮತ್ತೊಂದು ಪಕ್ಕಾ ಕಾಮಿಡಿ ಸಿನಿಮಾ ಮೂಲಕ ಈ ಜೋಡಿ ಮತ್ತೆ ಪ್ರೇಕ್ಷಕರ ಮುಂದೆ ಬಂದು ನಿಂತಿದೆ. ದುನಿಯಾ ವಿಜಯ್ ನಟನೆಯ ಹೊಸ ಸಿನಿಮಾ ‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರ ಇದೇ ವಾರ ಬಿಡುಗಡೆಯಾಗುತ್ತಿದೆ.

ಈ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹೊಸ ಚಿತ್ರ ‘ಜಾನಿ ಜಾನಿ ಎಸ್ ಪಪ್ಪಾ’ ದ ಪದ್ಮಾವತಿ ಆಗಿ ಕಾಣಿಸಿಕೊಂಡಿದ್ದಾರೆ. ಹಳೆ ಜಾನಿಗೆ ಹೊಸ ಪದ್ದು ಸಾಥ್ ನೀಡಿದ್ದಾರೆ. ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಂದಾಗಿದ್ದಾರೆ. ಇಬ್ಬರ ಲುಕ್ ಸೂಪರ್ ಆಗಿದೆ. ರಚಿತಾ ಹಳೆಯ ಎಲ್ಲ ಸಿನಿಮಾಗಿಂತ ಹೆಚ್ಚು ಅಂದವಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡ್ರನ್ ಡ್ರೆಸ್ ಗಳನ್ನು ತೊಟ್ಟು ಬುಲ್ ಬುಲ್ ಬಳುಕಿದ್ದಾರೆ.

About the author

ಕನ್ನಡ ಟುಡೆ

Leave a Comment