ಕ್ರೀಡೆ

ಈ ಸಲ ಕಪ್ ನಮ್ದೇ ಆದ್ರೆ ಪ್ರೋಕಬ್ಬಡ್ಡಿ ಟ್ವಿಟರ್ ಪೇಜ್ ನಲ್ಲಿ ಗುಜರಾತ್ ಚಾಂಪಿಯನ್

ಬೆಂಗಳೂರು: ತೀವ್ರ ಕುತೂಹಲ ಕೆರಳಸಿದ್ದ ಪ್ರೋ ಕಬ್ಬಡ್ಡಿ ಸೀಸನ್ 6 ನ ಚಾಂಪಿಯನ್ ಆಗಿ ಬೆಂಗಳೂರು ಬುಲ್ಸ್ ಹೊರ ಹೊಮ್ಮಿದ್ದರೂ ಪ್ರೋ ಕಬ್ಬಡ್ಡಿ ಟ್ವಿಟರ್ ಪೇಜ್ ನಲ್ಲಿ ಗುಜರಾತ್ ಚಾಂಪಿಯನ್ ಆಗಿದೆ ಎಂದು ಹೇಳಿ ಕೆಲಕಾಲ ಮುಜುಗರಕ್ಕೀಡಾಗಿತ್ತು.

ಹೌದು.. ರವಿವಾರ ನಡೆದ ಪ್ರೋ ಕಬ್ಬಡ್ಡಿ ಸೀಸನ್ 6ನ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಗುಜರಾತ್ ತಂಡವನ್ನು 38-33ರ ಅಂತರದಲ್ಲಿ ರೋಚಕವಾಗಿ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದರೆ ಬೆಂಗಳೂರು ಬುಲ್ಸ್ ತಂಡ ಗೆದ್ದ ವಿಚಾರವನ್ನು ತರಾತುರಿಯಲ್ಲಿ ಟ್ವಿಟರ್ ನಲ್ಲಿ ಪ್ರಕಟಿಸಲು ಹೋದ ಪ್ರೋ ಕಬ್ಬಡ್ಡಿ ಟ್ವಿಟರ್ ಪೇಜ್ ಆತುರದಲ್ಲಿ ಬುಲ್ಸ್ ತಂಡ ಸೋತಿದೆ ಎಂದು ಟ್ವೀಟ್ ಮಾಡಿತ್ತು. ಬಳಿಕ ಇದಕ್ಕೆ ಅಭಿಮಾನಿಗಳು ವಿರೋದ ವ್ಯಕ್ತಪಡಿಸುತ್ತಿದ್ದಂತೆಯೇ ತನ್ನ ಪ್ರಮಾದದಿಂದ ಎಚ್ಚೆತ್ತುಕೊಂಡ ಟ್ವಿಟರ್ ಪೇಜ್ ಕೂಡಲೇ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.
ಕನ್ನಡದಲ್ಲಿ ಮಾಡಲಾಗಿದ್ದ ಟ್ವೀಟ್ ನಲ್ಲಿ ಗುಜರಾತ್ ತಂಡ ತನ್ನ ಎರಡನೇ ಪ್ರಯತ್ನದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿದೆ ಪ್ರಶಸ್ತಿ ತನ್ನದಾಗಿಸಿಕೊಂಡಿದೆ ಎಂದು ಟ್ವೀಟ್ ಮಾಡಲಾಗಿತ್ತು. ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಡಲೇ ಆ ಟ್ವೀಟ್ ಅನ್ನು ಡಿಲೀಟ್ ಮಾಡಿ ಮತ್ತೊಂದು ಟ್ವೀಟ್ ಮೂಲಕ ಚಾಂಪಿಯನ್ ಬುಲ್ಸ್ ತಂಡಕ್ಕೆ ಶುಭ ಕೋರಿದ್ದಾರೆ.

About the author

ಕನ್ನಡ ಟುಡೆ

Leave a Comment