ರಾಜಕೀಯ

ಈ ಸೂ…..ಮಗ ಏನೆಲ್ಲಾ ಮಾಡಿಬಿಟ್ಟ: ಮೋದಿ ವಿರುದ್ಧ ರೋಷನ್ ಬೇಗ್

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಈ ಹಿಂದೆ ನಟ ಪ್ರಕಾಶ್ ರೈ ಮಾತನಾಡಿದ್ದರಿಂದ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇಂದು ಸಚಿವ ರೋಷನ್ ಬೇಗ್ ಸಹ ಮೋದಿಯವರನ್ನ ಅವಾಚ್ಯ ಶಬ್ದಗಳಿಂಸ ನಿಂದಿಸಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಎಲ್ಲರೂ ‘ನಮ್ಮ ಮೋದಿ ನಮ್ಮ ಮೋದಿ’ ಅಂತ ಹೊಗಳುತ್ತಿದ್ದರು. ಅಧಿಕಾರಕ್ಕೆ ಕೂಡಿಸಿದ ಜನರೇ ಈಗ ಮೋದಿಯನ್ನು ಶಪಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. “ನೋಟ್ ಬ್ಯಾನ್ ಮಾಡಿದ ಮೇಲೆ ಏನಾಯ್ತು? ಜನರು ‘ಈ ಸೂ.. ಮಗ ಏನೆಲ್ಲಾ ಮಾಡಿಬಿಟ್ಟ’ ಎಂದು ಬೈಯುತ್ತಿದ್ದಾರೆ” ಎಂದು ರೋಷನ್ ಬೇಗ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷ ಇಡೀ ಭಾರತ ದೇಶವನ್ನು ಅಭಿವೃದ್ಧಿಪಡಿಸಿತ್ತು. ಇಂದಿರಾಗಾಂಧಿ ತಮ್ಮ ಬದುಕನ್ನೇ ದೇಶಕ್ಕಾಗಿ ಮುಡಿಪಾಗಿಟ್ಟರು. ರಾಜೀವ್ ಗಾಂಧಿ ಕೂಡ ತಮ್ಮ ಜೀವನ ತ್ಯಾಗ ಮಾಡಿದರು. ಆದರೆ ಈಗ ಅವರ ಮಗ ರಾಹುಲ್ ಗಾಂಧಿಯನ್ನು ಮಾತ್ರ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ ಎಂದು ರೋಷನ್ ಬೇಗ್ ವಿಷಾದ ವ್ಯಕ್ತಪಡಿಸಿದ್ದಾರೆ.

“ರಾಜ್ಯದ ಜನರನ್ನು ಸಿಎಂ ಸಿದ್ರಾಮಯ್ಯ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅನ್ನಭಾಗ್ಯ, ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಹಾಲು ಕೊಡುವ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ನಿನ್ನೆ ಸಹ ಹೊಸ ಯೋಜನೆ ಆರಂಭಿಸಿದ್ದಾರೆ. ಗರ್ಭಿಣಿಯರಿಗೆ ಬಿಸಿಯೂಟ ನೀಡುವ ಯೋಜನೆ ಕೊಟ್ಟಿದ್ದಾರೆ. ಮೋದಿ ಇಂತಹ ಜನಪರ ಯೋಜನೆ ಮಾಡೋದು ಬಿಟ್ಟು, ಸುಮ್ಮನೆ ಮೈಕ್​ ಹಿಡ್ಕೊಂದು ಮನ್​ ಕಿ ಬಾತ್, ಮನ್​ ಕಿ ಬಾತ್​ ಅಂತ ಓಳ್​ ಬಿಡೋದೆಲ್ಲ ಬೇಡ,” ಎಂದು ನಗರಾಭಿವೃದ್ಧಿ ಸಚಿವರು ಟೀಕಿಸಿದ್ದಾರೆ.

“ನಾವು 5 ರೂಪಾಯಿಗೆ ಬ್ರೇಕ್​ ಫಾಸ್ಟ್, 10 ರೂಪಾಯಿಗೆ ಊಟ ಕೊಡ್ತೀದ್ದೀವಿ. ನೀವ್ಯಾಕೆ ಇದನ್ನೆಲ್ಲ ಕೊಡಲಿಲ್ಲ? ಯಡಿಯೂರಪ್ಪ ಸಿಎಂ ಆಗಿದ್ದಾಗ ಜನರಿಗೆ ಇದೆನ್ನೆಲ್ಲ ಯಾಕೆ ಕೊಡಲಿಲ್ಲ? ಯಡಿಯೂರಪ್ಪ ಬರೀ ಶೋಭಾ ಕರಂದ್ಲಾಜೆ ನೋಡ್ಕೊಂಡು ನಿಂತಿದ್ದರು” ಎಂದು ರೋಷನ್ ಬೇಗ್ ವ್ಯಂಗ್ಯವಾಡಿದರು.

About the author

ಕನ್ನಡ ಟುಡೆ

Leave a Comment